ಮುಂಬೈನಲ್ಲಿ ಕೊನೆಯುಸಿರೆಳೆದ ಆಸ್ಟ್ರೇಲಿಯಾದ ಖ್ಯಾತ ಕ್ರಿಕೆಟಿಗ

ಗುರುವಾರ, 24 ಸೆಪ್ಟಂಬರ್ 2020 (17:00 IST)
ಮುಂಬೈ: ಆಸ್ಟ್ರೇಲಿಯಾದ ಖ್ಯಾತ ಮಾಜಿ ಕ್ರಿಕೆಟಿಗ ಡೀನ್ ಜೋನ್ಸ್ ಹೃದಯಾಘಾತದಿಂದಾಗಿ ಮುಂಬೈನ ಹೋಟೆಲ್ ಕೊಠಡಿಯಲ್ಲಿ ಕೊನೆಯುಸಿರೆಳೆದಿದ್ದಾರೆ.


ಐಪಿಎಲ್ ಕಾಮೆಂಟರಿ ಪ್ಯಾನೆಲ್ ನಲ್ಲಿದ್ದ ಜೋನ್ಸ್ ತನ್ನ ಕರ್ತವ್ಯ ನಿರ್ವಹಣೆಗಾಗಿ ಮುಂಬೈಗೆ ಬಂದಿದ್ದರು. ಆದರೆ ಬೆಳಿಗ್ಗೆ ಚೆನ್ನಾಗಿಯೇ ಇದ್ದ ಅವರು ಮಧ್ಯಾಹ್ನದ ವೇಳೆಗೆ ಅಸ್ವಸ್ಥರಾಗಿದ್ದರು. ಅವರ ನಿಧನಕ್ಕೆ ಕ್ರಿಕೆಟ್ ಲೋಕ ಆಘಾತ ವ್ಯಕ್ತಪಡಿಸಿದೆ. ಆಸ್ಟ್ರೇಲಿಯಾ ಪರ 52 ಟೆಸ್ಟ್, 164 ಏಕದಿನ ಪಂದ್ಯಗಳಲ್ಲಿ ಆಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ