ಧೋನಿ ಕಂಡ್ರೆ ನಿಮಗ್ಯಾಕೆ ಉರಿ? ಗಂಭೀರ್ ಮೇಲೆ ಮುಗಿಬಿದ್ದ ನೆಟ್ಟಿಗರು

ಗುರುವಾರ, 24 ಸೆಪ್ಟಂಬರ್ 2020 (11:12 IST)
ದುಬೈ: ಐಪಿಎಲ್ 13 ರ ರಾಜಸ್ಥಾನ್ ರಾಯಲ್ಸ್ ವಿರುದ್ಧಧ ಪಂದ್ಯದಲ್ಲಿ ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್ ಗಿಳಿದು ಧೋನಿ ತಪ್ಪು ಮಾಡಿದರು ಎಂದು ಸೋಲಿನ ಗೂಬೆ ಕೂರಿಸಿದ್ದಕ್ಕೆ ಗೌತಮ್ ಗಂಭೀರ್ ವಿರುದ್ಧ ಧೋನಿ ಅಭಿಮಾನಿಗಳು ಸಿಟ್ಟಾಗಿದ್ದಾರೆ.


ಧೋನಿ ಕೆಳ ಕ್ರಮಾಂಕದಲ್ಲಿ ಆಡಲಿಳಿದಿದ್ದಲ್ಲದೆ, ಆರಂಭದಲ್ಲಿ ನಿಧಾನಗತಿಯ ರನ್ ಗಳಿಸಿದರು. ಅವರು ನಾಯಕನಾಗಿ ಆಡಬೇಕಿತ್ತು ಎಂದು ಗಂಭೀರ್ ಟೀಕಿಸಿದ್ದರು. ಇದರಿಂದ ಆಕ್ರೋಶಗೊಂಡಿರುವ ಟ್ವಿಟರಿಗರು ನಿಮಗ್ಯಾಕೆ ಧೋನಿ ಕಂಡರೆ ಹೊಟ್ಟೆ ಉರಿ? ಕ್ರಿಕೆಟ್ ನಲ್ಲಿ ನೀವು ಎಲ್ಲಾ ಸಾಧಿಸಿ ಈಗ ಮಾತನಾಡುತ್ತಿರುವವರಂತೆ ಆಡಬೇಡಿ ಎಂದು ಹಲವರು ಗಂಭೀರ್ ವಿರುದ್ಧ ಕಿಡಿ ಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ