ಐಪಿಎಲ್ 13: ಮೂರನೇ ಪಂದ್ಯದಲ್ಲಿ ಚೆನ್ನೈಗೆ ಡೆಲ್ಲಿ ಸವಾಲು

ಶುಕ್ರವಾರ, 25 ಸೆಪ್ಟಂಬರ್ 2020 (09:45 IST)
ದುಬೈ: ಐಪಿಎಲ್ 13 ರ ಇಂದಿನ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆಯಲಿದೆ. ಚೆನ್ನೈಗೆ ಇದು ಮೂರನೇ ಪಂದ್ಯವಾದರೆ ಡೆಲ್ಲಿಗೆ ಎರಡನೇ ಪಂದ್ಯವಾಗಿದೆ.


ಈಗಾಗಲೇ ಚೆನ್ನೈ ಮೊದಲ ಪಂದ್ಯ ಗೆದ್ದು ಕಳೆದ ಪಂದ್ಯದಲ್ಲಿ ಸೋತು ಸಿಹಿ-ಕಹಿ ಅನುಭವ ಪಡೆದಿದೆ. ಅದರಲ್ಲೂ ಕಳೆದ ಪಂದ್ಯದಲ್ಲಿ ಧೋನಿ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಗಿಳಿದಿದ್ದು, ಅವರ ನಾಯಕತ್ವದ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಿತ್ತು. ಆದರೆ ಧೋನಿ ಈ ರೀತಿಯ ಟೀಕೆಗಳಿಗೆಲ್ಲಾ ತಲೆಕೆಡಿಸಿಕೊಂಡು ತಮ್ಮ ನಿರ್ಧಾರ ಬದಲಿಸುವ ಜಾಯಮಾನದವರಲ್ಲ. ಅವರಿಗೆ ಸರಿ ಎನಿಸಿದ್ದನ್ನಷ್ಟೇ ಮಾಡುವರು. ಇನ್ನು, ಡೆಲ್ಲಿ ಕಳೆದ ಪಂದ್ಯದಲ್ಲಿ ಗೆದ್ದ ಉತ್ಸಾಹದಲ್ಲಿದೆ. ಈ ಪಂದ್ಯದಲ್ಲಾದರೂ ಆರಂಭಿಕ ಶಿಖರ್ ಧವನ್ ಸಿಡಿಯಬಹುದು ಎಂಬ ನಿರೀಕ್ಷೆಯಿದೆ. ಒಂದು ವೇಳೆ ಧವನ್ ಸ್ಪೋಟಕ ಆರಂಭ ಒದಗಿಸಿದರೆ, ಬಳಿಕ ರಿಷಬ್ ಪಂತ್, ಶ್ರೇಯಸ್ ಐಯರ್ ಮಧ್ಯಮ ಕ್ರಮಾಂಕದಲ್ಲಿ ಸಿಡಿದರೆ ಡೆಲ್ಲಿ ಉತ್ತಮ ಮೊತ್ತ ಪೇರಿಸಬಹುದು. ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ