ಐಪಿಎಲ್ 13: ಕನ್ನಡಿಗರೇ ಆರ್ ಸಿಬಿಗೆ ಸೋಲುಣಿಸಿದರು

ಶುಕ್ರವಾರ, 25 ಸೆಪ್ಟಂಬರ್ 2020 (08:43 IST)
ದುಬೈ: ಐಪಿಎಲ್ 13 ರ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೀನಾಯ ಸೋಲು ಕಂಡಿದೆ.

 
ಕನ್ನಡಿಗ ಕೆಎಲ್ ರಾಹುಲ್ ನೇತೃತ್ವದ ಪಂಜಾಬ್ 97 ರನ್ ಗಳ ಭಾರೀ ಅಂತರದಿಂದ ಆರ್ ಸಿಬಿಗೆ ಸೋಲುಣಿಸಿದೆ. ಕನ್ನಡಿಗರೇ ಅಧಿಕವಾಗಿರುವ ಪಂಜಾಬ್ ಪರ ಸ್ವತಃ ನಾಯಕ ಕೆಎಲ್‍ ರಾಹುಲ್ ದಾಖಲೆಯ ಶತಕ ಸಿಡಿಸಿ ಮೊತ್ತವನ್ನು ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 206 ರನ್ ಗೇರಿಸಿದರು. ಇವರಿಗೆ ತಕ್ಕ ಸಾಥ್ ನೀಡಿದ ಮತ್ತೋರ್ವ ಕನ್ನಡಿಗ ಮಯಾಂಕ್ ಅಗರ್ವಾಲ್ 26 ರನ್ ಗಳಿಸಿದರು. ರಾಹುಲ್ 69 ಎಸೆತಗಳಲ್ಲಿ 14 ಬೌಂಡರಿ, 7 ಸಿಕ್ಸರ್ ಸಹಿತ 136 ರನ್ ಗಳಿಸಿ ಐಪಿಎಲ್ ಕೂಟದಲ್ಲಿ ಗರಿಷ್ಠ ವೈಯಕ್ತಿಕ ರನ್ ಗಳಿಸಿದ ದಾಖಲೆ ಮಾಡಿದರು. ಜತೆಗೆ ಆರೆಂಜ್ ಕ್ಯಾಪ್ ಕೂಡಾ ಅವರ ಪಾಲಾಗಿದೆ.

ಈ ಬೃಹತ್ ಮೊತ್ತ ಬೆನ್ನತ್ತಿದ ಆರ್ ಸಿಬಿ ಆರಂಭದಲ್ಲೇ ಎಡವಿಬಿತ್ತು. ಮೊದಲ ಪಂದ್ಯದಲ್ಲಿ ಭರವಸೆ ಮೂಡಿಸಿದ್ದ ದೇವದತ್ತ್ ಪಡಿಕ್ಕಲ್ 1 ರನ್ ಗಳಿಸಿ ಔಟಾದರೆ ಅವರ ಬೆನ್ನು ಬೆನ್ನಿಗೆ ಜೋಶ್ ಫಿಲಿಪ್,  ನಾಯಕ ವಿರಾಟ್ ಕೊಹ್ಲಿ ಕೂಡಾ ಔಟಾಗುವುದರೊಂದಿಗೆ ತಂಡದ ಬ್ಯಾಟಿಂಗ್ ಸಂಪೂರ್ಣ ಹಳ್ಳ ಹಿಡಿಯಿತು. ಮಧ್ಯಮ ಕ್ರಮಾಂಕದಲ್ಲಿ ಡಬ್ಲ್ಯು ಸುಂದರ್ 30, ಎಬಿಡಿ ವಿಲಿಯರ್ಸ್ 28, ಏರಾನ್ ಫಿಂಚ್ 20 ರನ್ ಗಳಿಸಿದ್ದು ಬಿಟ್ಟರೆ ಉಳಿದವರೆಲ್ಲರದ್ದೂ ಒಂದಂಕಿಯ ಸ್ಕೋರ್. ಇದರಿಂದಾಗಿ ಆರ್ ಸಿಬಿ 17 ಓವರ್ ಗಳಲ್ಲೇ 109 ರನ್ ಗಳಿಗೆ ಆಲೌಟ್ ಆಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ