ಐಪಿಎಲ್ 13: ಈ ಎರಡು ಕಾರಣಗಳಿಂದಲೇ ಸೋತ ಆರ್ ಸಿಬಿ

ಶುಕ್ರವಾರ, 25 ಸೆಪ್ಟಂಬರ್ 2020 (09:12 IST)
ದುಬೈ: ಐಪಿಎಲ್ 13 ರ ನಿನ್ನೆಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲಲು ಪ್ರಮುಖವಾಗಿ ಇದುವೇ ಎರಡು ವಿಚಾರಗಳು ಕಾರಣವಾಯಿತು.


ಪಂಜಾಬ್ ಬ್ಯಾಟಿಂಗ್ ಮಾಡುತ್ತಿದ್ದಾಗ ಕೊಹ್ಲಿ ಎರಡುಬಾರಿ ಕೆಎಲ್ ರಾಹುಲ್ ಕ್ಯಾಚ್ ಬಿಟ್ಟರು. ಎರಡೂ ಬಾರಿಯೂ ಕೊಹ್ಲಿಯೇ ಕ್ಯಾಚ್ ಬಿಟ್ಟಿದ್ದು ಎನ್ನುವುದು ಗಮನಿಸಬೇಕಾದ ವಿಚಾರ. ಇದರಿಂದಾಗಿ ರಾಹುಲ್ ಅಬ್ಬರದ ಬ್ಯಾಟಿಂಗ್ ನಡೆಸಿ ತಂಡದ ಮೊತ್ತವನ್ನು 200 ರ ಗಡಿ ದಾಟಿಸಿದರು.

ಪಂಜಾಬ್ ಇನಿಂಗ್ಸ್ ನಲ್ಲಿ 15 ನೇ ಓವರ್ ವರೆಗೂ ಒಂದು ಹದಕ್ಕೆ ಆರ್ ಸಿಬಿ ಬೌಲರ್ ಗಳು ರನ್ ನಿಯಂತ್ರಿಸಿದ್ದರು. ಆದರೆ 15 ಓವರ್ ನ ನಂತರ ರಾಹುಲ್ ಅಬ್ಬರಿಸಲಾರಂಭಿಸಿದರು. ಇದಾದ ಬಳಿಕ ಆರ್ ಸಿಬಿ ಬೌಲಿಂಗ್ ಸಂಪೂರ್ಣ ಹಳಿ ತಪ್ಪಿತು. ಯರ್ರಾ ಬಿರ್ರಿ ರನ್ ಹರಿದುಬಂತು. ಬೌಲಿಂಗ್, ಫೀಲ್ಡಿಂಗ್ ಬಳಿಕ ಬ್ಯಾಟಿಂಗ್ ನಲ್ಲೂ ಸಂಪೂರ್ಣವಾಗಿ ಎಡವಿದ ಕೊಹ್ಲಿ ಬಾಯ್ಸ್ ಎದುರಾಳಿಗೆ ಸಂಪೂರ್ಣ ಶರಣಾಗತಿಯಾದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ