ಐಪಿಎಲ್ 13: ದಾಖಲೆಯ ಚೇಸ್ ಮಾಡಿದ ರಾಜಸ್ಥಾನ್ ರಾಯಲ್ಸ್
ಆದರೆ ಲೆಕ್ಕಾಚಾರ ಉಲ್ಟಾ ಮಾಡಿದ್ದ ರಾಜಸ್ಥಾನ್ ನಾಯಕ ಸ್ಟೀವ್ ಸ್ಮಿತ್, ಸಂಜು ಸ್ಯಾಮ್ಸನ್ ಜೋಡಿ. ಸ್ಮಿತ್ 27 ಎಸೆತಗಳಿಗೆ 50 ರನ್ ಗಳಿಸಿ ಔಟಾದರೆ ಸಂಜು ಸ್ಯಾಮ್ಸನ್ 42 ಎಸೆತಗಳಲ್ಲಿ 85 ರನ್ ಗಳಿಸಿದರು. ರಾಹುಲ್ ತೆವಾತಿಯ 31 ಎಸೆತಗಳಲ್ಲಿ 53 ರನ್ ಗಳಿಸಿ ಅಸಾಧ್ಯವೆನಿಸಿದ್ದ ಮೊತ್ತವನ್ನು ಸಾಧ‍್ಯವಾಗಿಸಿದರು. ರಾಜಸ್ಥಾನ್ 19.3 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 226 ರನ್ ಗಳಿಸುವ ಮೂಲಕ ಬೃಹತ್ ಮೊತ್ತವನ್ನು ಯಶಸ್ವಿಯಾಗಿ ಚೇಸ್ ಮಾಡಿದ ದಾಖಲೆ ಮಾಡಿತು.