ಸೆ.19ಕ್ಕೆ ದುಬೈನಲ್ಲಿ ಮುಂಬೈ ಇಂಡಿಯನ್ಸ್- ಸಿಎಸ್ ಕೆ ಸೆಣಸು

ಭಾನುವಾರ, 25 ಜುಲೈ 2021 (20:02 IST)
ಕೊರೊನಾ ಎರಡನೇ ಅಲೆಯ ಅಬ್ಬರದ ಹಿನ್ನೆಲೆಯಲ್ಲಿ ಮೊಟಕುಗೊಂಡಿದ್ದ ಐಪಿಎಲ್ ಟ-20ಯ 13ನೇ ಆವೃತ್ತಿಯ ಉಳಿದ ಪಂದ್ಯಗಳು ಅರಬ್ ದೇಶದಲ್ಲಿ ಸೆಪ್ಟೆಂಬರ್ 19ರಿಂದ ನಡೆಯಲಿದ್ದು, ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮೊದಲ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ.
ಭಾನುವಾರ ಬಿಸಿಸಿಐ ಅಬುಧಾಬಿಯಲ್ಲಿ ನಡೆಯಲಿರುವ ಟೂರ್ನಿಯ ಉಳಿದ ಪಂದ್ಯಗಳ ವೇಳಾಪಟ್ಟಿ ಬಿಡುಗಡೆ ಮಾಡಿದ್ದು, ಅಕ್ಟೋಬರ್ 8ರಂದು ನಡೆಯಲಿರುವ ಲೀಗ್ ನ ಕೊನೆಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಎದುರಾಗಲಿವೆ.
ದುಬೈನಲ್ಲಿ ಅಕ್ಟೋಬರ್ 10ರಂದು ಕ್ವಾಲಿಫೈಯರ್, ಶಾರ್ಜಾದಲ್ಲಿ ಅಕ್ಟೋಬರ್ 11 ಮತ್ತು 13ರಂದು ಎಲಿಮಿನೇಟರ್ ಮತ್ತುಕ್ವಾಲಿಫೈಯರ್-2 ಪಂದ್ಯಗಳು ನಡೆಯಲಿವೆ. ದುಬೈನಲ್ಲಿ ಅಕ್ಟೋಬರ್ 15ರಂದು ಫೈನಲ್ ಪಂದ್ಯ ಜರುಗಲಿವೆ.
ಸೆಪ್ಟೆಂಬರ್ 19ರಂದು ಮುಂಬೈ- ಚೆನ್ನೈ ಮುಖಾಮುಖಿ ನಂತರ ಮಾರನೇ ದಿನ ನಡೆಯುವ ಪಂದ್ಯದಲ್ಲಿ ಆರ್ ಸಿಬಿ ಮತ್ತು ಕೆಕೆಆರ್ ತಂಡಗಳು ಅಬುಧಾಬಿಯಲ್ಲಿ ಎದುರಾಗಲಿವೆ. ಸೆಪ್ಟೆಂಬರ್ 24ರಂದು ಆರ್ ಸಿಬಿ ಮತ್ತು ಸಿಎಸ್ ಕೆ ತಂಡಗಳು ಸೆಣಸಲಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ