ಧೋನಿ ಕೆಳಗಿಳಿಸಿದ್ದು ಮತ್ತು ಕೆಳಗಿಳಿಸಿದ ರೀತಿ ಅತ್ಯಂತ ಕೀಳುದರ್ಜೆಯದ್ದು, ಧೊನಿ ಭಾರತೀಯ ಕ್ರಿಕೆಟ್`ನ ಜುವೆಲ್ಲರಿ ಇದ್ದಂತೆ, 8-9 ವರ್ಷಗಳಲ್ಲಿ ಧೋನಿ ಎಲ್ಲ ಮಾದರಿಯ ಸರಣಿಗಳನ್ನ ಗೆದ್ದಿದ್ದಾರೆ. ಮಾಲೀಕರು ನನ್ನ ಹಣದಿಂದ ನನ್ನ ತಂಡ ನಡೆಸುತ್ತೇನೆಂದು ಹೇಳಬಹುದು. ಆದರೆ, ಈ ನಿರ್ಧಾರಕ್ಕೂ ಮುನ್ನ ಧೋನಿಯ ಘನತೆ ಮತ್ತು ವಿಶ್ವಾಸಾರ್ಹತೆ ಬಗ್ಗೆ ಗಮನಹರಿಸಿದ್ದಾರಾ..? ಹಾಗೇನಾದರೂ ಗಮನ ಹರಿಸಿದ್ದರೆ ಈ ನಿರ್ಧಾರ ಕೈಗೊಳ್ಳುತ್ತಿರಲಿಲ್ಲ ಎಂದು ಅಜರುದ್ದೀನ್ ಹೇಳಿದ್ದಾರೆ.
ಮೊನ್ನೆಯಷ್ಟೇ, ಪುಣೆ ತಂಡಕ್ಕೆ ಯುವ ನಾಯಕನ ಅಗತ್ಯವಿದೆ ಎಂದು ಹೇಳಿದ್ದ ಮಾಲೀಕ ಸಜೀವ್ ಗೋಯೆಂಕಾ ಧೋನಿಯನ್ನ ನಾಯಕನ ಸ್ಥಾನದಿಂದ ಕೆಳಗಿಳಿಸಿದ್ದ ನಿರ್ಧಾರ ಪ್ರಕಟಿಸಿದ್ದರು. |