ಐಪಿಎಲ್ ಪ್ರಾಯೋಜಕರಿಂದ ಭಾರೀ ಲಾಭ ಪಡೆಯಲು ಯೋಜನೆ ನಡೆಸಿರುವ ಬಿಸಿಸಿಐ

ಗುರುವಾರ, 13 ಆಗಸ್ಟ್ 2020 (10:29 IST)
ಮುಂಬೈ: ಐಪಿಎಲ್ 13 ರ ಟೈಟಲ್ ಪ್ರಾಯೋಜಕತ್ವದಿಂದ ವಿವೋ ಹಿಂದೆ ಸರಿಯುತ್ತಿದ್ದಂತೇ ಬಿಸಿಸಿಐಗೆ ಈಗ ಹೊಸ ಪ್ರಾಯೋಜಕರನ್ನು ಹುಡುಕುವ ತಲೆನೋವು ಶುರುವಾಗಿದೆ. ಅಲ್ಲಿ ನಷ್ಟವಾದ ದುಡ್ಡು ಬೇರೆ ಪ್ರಾಯೋಜಕರಿಂದ ಗಳಿಸಲು ಬಿಸಿಸಿಐ ಯೋಜನೆ ರೂಪಿಸಿದೆ.


ವಿವೋ ಅಲ್ಲದೇ ಬೇರೆ ಕಂಪನಿಗಳೂ ಐಪಿಎಲ್ ನಲ್ಲಿ ಅಧಿಕೃತ ಪ್ರಾಯೋಜಕತ್ವ ವಹಿಸಿವೆ. ಈ ಸಂಸ್ಥೆಗಳಿಂದ ಸುಮಾರು 300 ಕೋಟಿ ರೂ.ಗಳಷ್ಟು ಲಾಭ ಜೇಬಿಗಿಳಿಸಲು ಬಿಸಿಸಿಐ ತಯಾರಿ ನಡೆಸಿದೆ.

ಈ ನಡುವೆ ಟೈಟಲ್ ಪ್ರಾಯೋಜಕತ್ವಕ್ಕೂ ಬಿಡ್ ಸಲ್ಲಿಸಲು ಆಹ್ವಾನಿಸಿದ್ದು, ಆ ಮೂಲಕವೂ ಪ್ರಾಯೋಜಕರನ್ನು ಸೆಳೆದು ಐಪಿಎಲ್ 13 ರಿಂದ ಆದಾಯ ಬಾಚಲು ಬಿಸಿಸಿಐ ಯೋಜನೆ ರೂಪಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ