ಕಳೆದ ಐಪಿಎಲ್ ನ ಗರಿಷ್ಠ ರನ್ ಸರದಾರ ಪಟ್ಟಿ ಇಲ್ಲಿದೆ
ಕಳೆದ ಐಪಿಎಲ್ ನಲ್ಲಿ ಚಾಂಪಿಯನ್ ಆಗಿದ್ದ ಚೆನ್ನೈ ಸೂಪರ್ ಕಿಂಗ್ಸ್. ಅದೇ ತಂಡದ ಓಪನರ್ ಋತುರಾಜ್ ಗಾಯಕ್ ವಾಡ್ ಗರಿಷ್ಠ ರನ್ ಗಳಿಸಿದ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದರು. ಅವರು 635 ರನ್ ಗಳಿಸಿದ್ದರು. ಚೆನ್ನೈನ ಇನ್ನೊಬ್ಬ ಆಟಗಾರ ಫಾ ಡು ಪ್ಲೆಸಿಸ್ 633 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದರು.
ಕೆಎಲ್ ರಾಹುಲ್ 626 ರನ್ ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, 587 ರನ್ ಗಳೊಂದಿಗೆ ಶಿಖರ್ ಧವನ್ ನಾಲ್ಕನೇ ಸ್ಥಾನದಲ್ಲಿದ್ದರು. ಈ ಬಾರಿ ಇವರೆಲ್ಲರೂ ಬೇರೆ ಬೇರೆ ತಂಡದಿಂದ ಕಣಕ್ಕಿಳಿಯುತ್ತಿದ್ದು, ಯಾವ ಆಟಗಾರ ರನ್ ಸರದಾರನಾಗುತ್ತಾನೆ ಕಾದು ನೋಡಬೇಕು.