ಐಪಿಎಲ್ 2022: ಫೈನಲ್ ಗೇರಿದ ಗುಜರಾತ್ ಟೈಟನ್ಸ್

ಬುಧವಾರ, 25 ಮೇ 2022 (08:20 IST)
ಮುಂಬೈ: ಐಪಿಎಲ್ 2022 ರಲ್ಲಿ ಗುಜರಾತ್ ಟೈಟನ್ಸ್ ಪದಾರ್ಪಣೆ ಕೂಟದಲ್ಲೇ ಫೈನಲ್ ಗೇರಿದ ಸಾಧನೆ ಮಾಡಿದೆ. ರಾಜಸ್ಥಾನ್ ವಿರುದ್ಧ ಪ್ಲೇ ಆಫ್ ಪಂದ್ಯದಲ್ಲಿ 7 ವಿಕೆಟ್ ಗಳ ಭರ್ಜರಿ ಜಯ ಗಳಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿತು. ಜೋಸ್ ಬಟ್ಲರ್ 89, ಸಂಜು ಸ್ಯಾಮ್ಸನ್ 47, ದೇವದತ್ತ್ ಪಡಿಕ್ಕಲ್ 28 ರನ್ ಗಳಿಸಿತು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಗುಜರಾತ್ 19.3 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಆರಂಭಿಕ ವೃದ್ಧಿಮಾನ್ ಸಹಾ ಶೂನ್ಯಕ್ಕೆ ಔಟಾದರು. ಶುಬ್ನಂ ಗಿಲ್ 35, ಮ್ಯಾಥ್ಯೂ ವೇಡ್ 35 ರನ್ ಗಳಿಸಿ ತಂಡಕ್ಕೆ ಆಧಾರವಾದರು. ಬಳಿಕ ಬಂದ ಹಾರ್ದಿಕ್ ಪಾಂಡ್ಯ 27 ಎಸೆತಗಳಲ್ಲಿ ಅಜೇಯ 40, ಡೇವಿಡ್ ಮಿಲ್ಲರ್ 38 ಎಸೆತಗಳಲ್ಲಿ ಅಜೇಯ 68 ರನ್ ಗಳಿಸಿದರು.  ಇದರೊಂದಿಗೆ ಹಾರ್ದಿಕ್ ಪಡೆ ಮೊದಲನೆಯ ತಂಡವಾಗಿ ಫೈನಲ್ ಗೇರಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ