ಐಪಿಎಲ್‌ ಚಾಂಪಿಯನ್‌ ತಂಡಕ್ಕೆ ಸಿಗಲಿದೆ ಮಿನುಗುವ ಟ್ರೋಫಿಯೊಂದಿಗೆ ಬರೋಬ್ಬರಿ ₹20 ಕೋಟಿ ಬಹುಮಾನ

Sampriya

ಭಾನುವಾರ, 26 ಮೇ 2024 (12:34 IST)
Photo Courtesy X
ಚೆನ್ನೈ: ಇಂದು ಚೆನ್ನೈನಲ್ಲಿ ಐಪಿಎಲ್ ಟೂರ್ನಿಯ ಫೈನಲ್​ ಪಂದ್ಯ ನಡೆಯಲಿದೆ. ಕೋಲ್ಕತ್ತಾ ನೈಟ್​ ರೈಡರ್ಸ್ ಮತ್ತು ಸನ್​ರೈಸರ್ಸ್​ ಹೈದರಾಬಾದ್ ತಂಡಗಳು ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿದೆ. ವಿಶ್ವದಲ್ಲೇ ಅತ್ಯಂತ ಶ್ರೀಮಂತ ಟಿ20 ಲೀಗ್ ಎಂಬ ಹಿರಿಮೆಗೆ ಪಾತ್ರವಾಗಿರುವ ಐಪಿಎಲ್‌ ವಿಜೇತ ತಂಡವು ಆಕರ್ಷಕ ಟ್ರೋಫಿಯೊಂದಿಗೆ ಬರೋಬ್ಬರಿ ₹20 ಕೋಟಿ ಬಹುಮಾನವನ್ನು ಜೇಬಿಗಿಳಿಸಲಿದೆ.

ರನ್ನರ್ ಅಪ್‌ ತಂಡಕ್ಕೆ ₹ 15 ಕೋಟಿ ಸಿಗಲಿದೆ. ಮೂರನೇ ಸ್ಥಾನಿಯಾದ ರಾಜಸ್ಥಾನ ರಾಯಲ್ಸ್‌ಗೆ ₹ 7 ಕೋಟಿ ಮತ್ತು ಚತುರ್ಥ ಸ್ಥಾನ ಪಡೆದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ₹ 6.5 ಕೋಟಿ ಬಹುಮಾನ ಸಿಗಲಿದೆ  ಸಿಗಲಿದೆ. ಒಟ್ಟು ಬಹುಮಾನ ಮೊತ್ತ ₹ 46.5 ಕೋಟಿ ಆಗಿದೆ.

ಟೂರ್ನಿಯಲ್ಲಿ ಅತ್ಯಧಿಕ ರನ್​ ಗಳಿಸಿದ ಆಟಗಾರನಿಗೆ ಆರೆಂಜ್ ಕ್ಯಾಪ್ ನೀಡಲಾಗುತ್ತದೆ. ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗೆ ಪರ್ಪಲ್ ಕ್ಯಾಪ್ ನೀಡಲಾಗುತ್ತದೆ. ಆರೆಂಜ್ ಮತ್ತು ಪರ್ಪಲ್ ಕ್ಯಾಪ್ ಗೆದ್ದ ಆಟಗಾರರಿಗೆ ₹ 15 ಲಕ್ಷ ಬಹುಮಾನ ಸಿಗಲಿದೆ. ಸದ್ಯ ಬೆಂಗಳೂರು ತಂಡದ ವಿರಾಟ್​ ಕೊಹ್ಲಿ 741 ರನ್​ ಬಾರಿಸಿ ಆರೆಂಜ್ ಕ್ಯಾಪ್ ಹೊಂದಿದ್ದಾರೆ. ಈ ಟೂರ್ನಿಯಲ್ಲಿ ಅವರ ರನ್‌ ಹಿಂದಿಕ್ಕಲು ಸದ್ಯ ಯಾರಿಗೂ ಅಸಾಧ್ಯವಾಗಿದೆ.

24 ವಿಕೆಟ್​ ಪಡೆದಿರುವ ಪಂಜಾಬ್ ಕಿಂಗ್ಸ್​​ ತಂಡದ ಹರ್ಷಲ್​ ಪಟೇಲ್​ ಬಳಿ ಪರ್ಪಲ್​ ಕ್ಯಾಪ್​ ಸದ್ಯ  ಇದೆ. ಆದರೆ ಈ ಕ್ಯಾಪ್​ ಪಡೆಯಲು ಕೆಕೆಆರ್​ ತಂಡದ ಸ್ಪಿನ್ನರ್​ ವರಣ್​ ಚರ್ಕವರ್ತಿಗೆ ಉತ್ತಮ ಅವಕಾಶವಿದೆ. ವರುಣ್​ ಸದ್ಯ 20 ವಿಕೆಟ್​ ಕಿತ್ತಿದ್ದಾರೆ. ಫೈನಲ್​ ಪಂದ್ಯದಲ್ಲಿ 5 ವಿಕೆಟ್​ ಕಿತ್ತರೆ ಈ ಕ್ಯಾಪ್​ ಅವರ ಪಾಲಾಗಲಿದೆ.

ಟೂರ್ನಿಯ ಉದಯೋನ್ಮುಖ ಆಟಗಾರನಿಗೆ ₹ 20 ಲಕ್ಷ ರೂಪಾಯಿ ನಗದು ಬಹುಮಾನವನ್ನು ಸಿಗಲಿದೆ. ಋತುವಿನ ಅತ್ಯಂತ ಮೌಲ್ಯಯುತ ಆಟಗಾರ ₹ 12 ಲಕ್ಷ ದೊರೆಯಲಿದೆ. ಇತರ ಪ್ರಶಸ್ತಿಗಳಾದ-ಪವರ್ ಪ್ಲೇಯರ್ ಆಫ್ ದಿ ಸೀಸನ್, ಸೂಪರ್ ಸ್ಟ್ರೈಕರ್ ಆಫ್ ದಿ ಸೀಸನ್ ಮತ್ತು ಗೇಮ್ ಚೇಂಜರ್ ಆಫ್ ದಿ ಸೀಸನ್ ಪಡೆದ ಆಟಗಾರ ಕ್ರಮವಾಗಿ ₹ 15 ಲಕ್ಷ ಮತ್ತು ₹ 12 ಲಕ್ಷ ನಗದು ಬಹುಮಾನ ಪಡೆಯಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ