ಮುಂಬೈ: ಭಾರತದಲ್ಲಿ ಚೀನಾ ವಿರುದ್ಧ ಆಕ್ರೋಶ ಹೆಚ್ಚಾಗಿದ್ದರಿಂದ ಕಾರಣ ಕಳೆದ ಐಪಿಎಲ್ ಗೆ ವಿವೋ ಶೀರ್ಷಿಕೆ ಪ್ರಾಯೋಜಕತ್ವದಿಂದ ಹಿಂದೆ ಸರಿದಿತ್ತು. ಮುಂದಿನ ಐಪಿಎಲ್ ಗೂ ವಿವೋ ಹೊರಗುಳಿಯುವ ಸಾಧ‍್ಯತೆ ಹೆಚ್ಚಾಗಿದೆ.
ವಿವೋ ಪ್ರಾಯೋಜಕತ್ವದ ಬಗ್ಗೆ ಅಭಿಮಾನಿಗಳು ತೀವ್ರ ಆಕ್ಷೇಪವೆತ್ತಿದ್ದರು. ಹೀಗಾಗಿ ಬಿಸಿಸಿಐ ಕಳೆದ ಐಪಿಎಲ್ ಗೆ ವಿವೋ ಕೈ ಬಿಟ್ಟು, ಡ್ರೀಮ್ ಇಲೆವೆನ್ ಗೆ ಪ್ರಾಯೋಜಕತ್ವ ನೀಡಿತ್ತು. ಈ ಬಾರಿಯೂ ಅದು ಮುಂದುವರಿಯುವ ಸಾಧ‍್ಯತೆಯಿದೆ. ಮುಂದಿನ ಎರಡು ವರ್ಷಗಳಿಗೆ ಐಪಿಎಲ್ ಪ್ರಾಯೋಜಕತ್ವದಿಂದ ವಿವೋ ದೂರವುಳಿಯುವ ಸಾಧ‍್ಯತೆಯಿದೆ ಎನ್ನಲಾಗಿದೆ.