ಐಪಿಎಲ್: ಯುವರಾಜ್ ಸಿಂಗ್ ರನ್ನು ಮುಜುಗರದಿಂದ ಪಾರು ಮಾಡಿದ ಮುಂಬೈ ಇಂಡಿಯನ್ಸ್

ಬುಧವಾರ, 19 ಡಿಸೆಂಬರ್ 2018 (10:27 IST)
ಮುಂಬೈ: ಒಂದು ಕಾಲದಲ್ಲಿ ಐಪಿಎಲ್ ನಲ್ಲಿ ಗರಿಷ್ಠ ಬೆಲೆಗೆ ಮಾರಾಟವಾದ ಖ್ಯಾತಿ ಹೊಂದಿದ್ದ ಯುವರಾಜ್ ಸಿಂಗ್ ರನ್ನು ನಿನ್ನೆ ನಡೆದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಕೊಳ್ಳುವವರೇ ಇಲ್ಲವಾಗಿದ್ದರು.


ಮೊದಲ ಸುತ್ತಿನಲ್ಲಿ ಯಾವುದೇ ತಂಡವೂ ಅವರನ್ನು ಖರೀದಿಸಲು ಆಸಕ್ತಿ ತೋರದೇ ಯುವಿ ಮುಖಭಂಗಕ್ಕೊಳಗಾಗಿದ್ದರು. ಸದ್ಯ ಅವರ ವಯಸ್ಸು, ಫಾರ್ಮ್ ನಿಂದಾಗಿ ಯಾವ ತಂಡವೂ ಅವರನ್ನು ಖರೀದಿಸುವ ಆಸಕ್ತಿ ತೋರಲಿಲ್ಲ.

ಆದರೆ ಕೊನೆಗೆ ಎರಡನೇ ಸುತ್ತಿನ ಹರಾಜಿನಲ್ಲಿ ಯುವರಾಜ್ ಹೆಸರು ಬಂದಾಗ ಅಂಬಾನಿ ಒಡೆತನದ ಮುಂಬೈ ಇಂಡಿಯನ್ಸ್ 1 ಕೋಟಿ ಕೊಟ್ಟು ಖರೀದಿಸಿತು. ಇದರಿಂದಾಗಿ ಯುವಿ ಸಂಭಾವ್ಯ ಮುಜುಗರ ತಪ್ಪಿಸಿಕೊಂಡರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ