ಬೆಂಗಳೂರಿನಲ್ಲಿ ಬಾಳೆ ಎಲೆ ರೇಟು ಬಲು ದುಬಾರಿ

Krishnaveni K

ಶನಿವಾರ, 24 ಮೇ 2025 (10:17 IST)
ಬೆಂಗಳೂರು: ತೆಂಗಿನ ಕಾಯಿ ಬಳಿಕ ಈಗ ರಾಜ್ಯ ರಾಜಧಾನಿಯಲ್ಲಿ ಬಾಳೆ ಎಲೆ ರೇಟು ಬಲು ದುಬಾರಿಯಾಗಿದೆ. ಬಾಳೆ ಎಲೆ ರೇಟು ಜಾಸ್ತಿಯಾಗಿರುವುದಕ್ಕೆ ಕಾರಣವೇನು ನೋಡಿ.

ಯಾವುದೇ ಹಬ್ಬ-ಹರಿದಿನವೆಂದರೆ ಬಾಳೆ ಎಲೆ ಇರಲೇಬೇಕು. ಕೆಲವರು ಮನೆಗೆ ಅತಿಥಿಗಳು ಬಂದಾಗ ಸಾಂಪ್ರದಾಯಿಕವಾಗಿ ಬಾಳೆ ಎಲೆಯಲ್ಲೇ ಊಟ ಬಡಿಸುತ್ತಾರೆ. ಇನ್ನು ಮನೆಯಲ್ಲಿ ಚಿಕ್ಕ ಪುಟ್ಟ ಕಾರ್ಯಕ್ರಮದಿಂದ ಹಿಡಿದು ಮದುವೆವರೆಗೂ ಬಾಳೆ ಎಲೆ ಅನಿವಾರ್ಯ.

ಆದರೆ ಮೊದಲೆಲ್ಲಾ ಒಂದು ಎಲೆಗೆ 5 ರೂ. ನಷ್ಟು ಇದ್ದಿದ್ದ ಬಾಳೆ ಎಲೆ ಈಗ ಏಕಾ ಏಕಿ ಏರಿಕೆಯಾಗಿದ್ದು ಒಂದು ಬಾಳೆ ಎಲೆಗೆ 8-10 ರೂ.ಗೆ ಮಾರಾಟವಾಗುತ್ತಿದೆ. ಒಂದು ಇಡೀ ಬಾಳೆ ಎಲೆಗೆ ಇಷ್ಟು ಬೆಲೆಯಿದೆ.  ಆದರೆ ನೀವು ಕಟ್ ಪೀಸ್ ಗಳಲ್ಲಿ ತೆಗೆದುಕೊಳ್ಳುತ್ತಿದ್ದರೆ ಕೊಂಚ ಕಡಿಮೆ ಬೀಳುತ್ತದೆ.

ಈಗ ಮದುವೆ ಸೀಸನ್. ಇತ್ತೀಚೆಗೆ ಫಂಕ್ಷನ್ ಗಳೂ ಜಾಸ್ತಿ. ಹೀಗಾಗಿಯೇ ಬಾಳೆ ಎಲೆಗೆ ಬೇಡಿಕೆ ಹೆಚ್ಚಾಗಿದೆ. ಇದಕ್ಕೇ ರೇಟ್ ಜಾಸ್ತಿಯಾಗಿದೆ ಎನ್ನುತ್ತಿದ್ದಾರೆ ಮಾರಾಟಗಾರರು. ಆದರೆ ಹೋಟೆಲ್ ಗಳಿಗೆ ಕಳುಹಿಸುವ ಕಟ್ ಪೀಸ್ ಬಾಳೆ ಎಲೆ ಬೆಲೆ ಮಾತ್ರ ಹೆಚ್ಚಾಗಿಲ್ಲ ಎನ್ನುತ್ತಿದ್ದಾರೆ. ಇನ್ನು ಮಳೆಗಾಲ ಬಂದರೆ ಹಬ್ಬಗಳು ಒಂದೊಂದಾಗಿ ಶುರುವಾಗುತ್ತದೆ. ಆಗ ರೇಟು ಹೆಚ್ಚಾಗಬಹುದೇ ವಿನಹ ಕಡಿಮೆಯಾಗಲ್ಲ. ಬಾಳೆ ಎಲೆ ಲೋಡ್ ಮೊದಲಿನಂತೇ ಬರುತ್ತಿದೆ. ಆದರೆ ಬೇಡಿಕೆ ಹೆಚ್ಚಾಗಿದ್ದರಿಂದ ಬೆಲೆ ಹೆಚ್ಚಾಗಿದೆ ಎನ್ನುವುದು ಮಾರಾಟಗಾರರ ಅಭಿಪ್ರಾಯ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ