ದೇಶದ 2ನೇ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್
ಶನಿವಾರ, 14 ಜುಲೈ 2018 (10:34 IST)
ನವದೆಹಲಿ : ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಮಾರುಕಟ್ಟೆ ಈಗ 7 ಲಕ್ಷ ಕೋಟಿ ವರಮಾನ ಹೊಂದುವ ಮೂಲಕ ಟಿಸಿಎಸ್ನ ನಂತರ ಈ ಪ್ರಮಾಣದ ವಹಿವಾಟನ್ನು ನಡೆಸಿದ ದೇಶದ 2ನೇ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.
ಇತ್ತೀಚೆಗಷ್ಟೇ ಟಿಸಿಎಸ್ 100 ಬಿಲಿಯನ್ ಡಾಲರ್ ವ್ಯವಹಾರದ ಗುಂಪಿಗೆ ಸೇರಿದ ಮೊದಲ ಭಾರತೀಯ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಅದಾದ ಬಳಿಕ ಇದೀಗ ರಿಲಯನ್ಸ್ ಷೇರುಪೇಟೆಯಲ್ಲಿ 102 ಬಿಲಿಯನ್ ಡಾಲರ್ ಎಂದರೆ, 7 ಲಕ್ಷದ ಸಾವಿರದ 404 ಕೋಟಿ ರೂ. ವ್ಯವಹಾರ ನಡೆಸುವ ಮೂಲಕ ದಾಖಲೆ ಬರೆದಿದೆ.
ರಿಲಯನ್ಸ್ ಷೇರುಗಳು 52 ವಾರಗಳ ಗರಿಷ್ಠ ಏರಿಕೆ ಕಂಡವು. ಶೇ 2.31 ರಷ್ಟು ಏರಿಕೆ ಕಾಣುವ ಮೂಲಕ 1107 ರೂ. ಗೆ ತಲುಪಿತು. ಹೀಗಾಗಿ ರಿಲಯನ್ಸ್ ಕಂಪನಿ ಒಟ್ಟು ಮಾರುಕಟ್ಟೆ ಮೌಲ್ಯ 102 ಬಿಲಿಯನ್ ಆಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ