ಮೊಬೈಲ್​ ಸಂಖ್ಯೆ 10 ರ ಬದಲಾಗಿ​ 11 ನಂಬರ್​ ಗಳನ್ನು ಜಾರಿಗೆ ತರಲು ಟ್ರಾಯ್ ನಿರ್ಧಾರ

ಭಾನುವಾರ, 22 ಸೆಪ್ಟಂಬರ್ 2019 (09:01 IST)
ನವದೆಹಲಿ : ಭಾರತದ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) ಮೊಬೈಲ್​ ಸಂಖ್ಯೆ 10 ಅಂಕೆಗಳ ಬದಲಾಗಿ​ 11 ಅಂಕಿಗಳ ನಂಬರ್​ ಗಳನ್ನು ಜಾರಿಗೆ ತರಲು ಚಿಂತನೆ ನಡೆಸಿದೆ.




ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ಟೆಲಿಕಾಂ ಸಂಪರ್ಕಕ್ಕೆ ಹೆಚ್ಚಾಗುತ್ತರುವ ಬೇಡಿಕೆ ಗಮನದಲ್ಲಿಟ್ಟುಕೊಂಡು ಟ್ರಾಯ್ ಈ ನಿರ್ಧಾರಕ್ಕೆ ಬಂದಿದೆ. ಮೊಬೈಲ್ ಹಾಗೂ ಲ್ಯಾಂಡ್ ಲೈನ್ ಎರಡಕ್ಕೂ ಇದು ಅನ್ವಯವಾಗಲಿದೆ

 

ಜನರು ಒಂದಕ್ಕಿಂತ ಹೆಚ್ಚಿನ ಮೊಬೈಲ್ ನಂಬರ್ ಗಳನ್ನು ಹೊಂದುತ್ತಿದ್ದಾರೆ. ಇದರಿಂದ  2050 ರಲ್ಲಿ 185 ಕೋಟಿ ​ ಮೊಬೈಲ್​ ಸಂಖ್ಯೆಗಳ ಅವಶ್ಯಕತೆ ಎದುರಾಗಲಿದೆ ಎಂದು ಟ್ರಾಯ್​ ಅಂದಾಜಿಸಿದೆ. ಹಾಗಾಗಿ ಮುಂದಿನ ದಿನಗಳಲ್ಲಿ 11 ಅಂಕೆಯ ಮೊಬೈಲ್ ಸಂಖ್ಯೆ ಅನಿವಾರ್ಯವೆಂದು ಟ್ರಾಯ್ ಹೇಳಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ