ಚಿತ್ರದುರ್ಗದ ರೈತ ಮಹಿಳೆಯ ನೆರವಿಗೆ ನಿಂತ ನಟ ಅನಿರುದ್ಧ್
ಈ ಮಹಿಳೆಯ ಕಷ್ಟಕ್ಕೆ ಮರುಗಿದ ನಟ ಅನಿರುದ್ಧ್ ಸಚಿವರಾದ ಬಿಸಿ ಪಾಟೀಲ್, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ನಾರಾಯಣ ಗೌಡ ಅವರನ್ನು ಸಂಪರ್ಕಿಸಿ ಮಹಿಳೆಯ ಸಮಸ್ಯೆ ವಿವರಿಸಿ ನೆರವಾಗುವಂತೆ ಕೋರಿದ್ದಾರೆ. ಅನಿರುದ್ಧ್ ಮನವಿಗೆ ಸ್ಪಂದಿಸಿರುವ ನಾಯಕರು ಮಹಿಳೆಯ ನೆರವಾಗಲು ಮುಂದೆ ಬಂದಿದ್ದಾರೆ. ಈ ಬಗ್ಗೆ ಖುಷಿಯಿಂದಲೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅನಿರುದ್ಧ್ ನಾವೆಲ್ಲರೂ ರೈತರ ಕಷ್ಟಕ್ಕೆ ನಮ್ಮ ಕೈಲಾದ ರೀತಿಯಲ್ಲಿ ಕೈ ಜೋಡಿಸೋಣ ಎಂದು ಕರೆ ನೀಡಿದ್ದಾರೆ.