ಎರಡನೇ ಮದುವೆಯಾದ ನಟ ಆಶಿಷ್ ವಿದ್ಯಾರ್ಥಿ

ಶುಕ್ರವಾರ, 26 ಮೇ 2023 (08:40 IST)
Photo Courtesy: Twitter
ಹೈದರಾಬಾದ್: ಬಹುಭಾಷಾ ನಟ ಆಶಿಷ್ ವಿದ್ಯಾರ್ಥಿ ತಮ್ಮ 60 ನೇ ವಯಸ್ಸಿನಲ್ಲಿ ಎರಡನೇ ಮದುವೆಯಾಗಿದ್ದಾರೆ.

ಫ್ಯಾಷನ್‍ ಡಿಸೈನರ್ ರೂಪಾಲಿ ಜೊತೆ ಆಶಿಷ್ ಎರಡನೇ ಮದುವೆಯಾಗಿದ್ದಾರೆ. ರೂಪಾಲಿಗೆ 50 ವರ್ಷ ವಯಸ್ಸು. ಆಶಿಷ್ ಇದಕ್ಕೆ ಮೊದಲು ರಾಜೋಶಿ ಎಂಬವರ ಜೊತೆ ಮದುವೆಯಾಗಿ ವಿಚ್ಛೇದನ ಪಡೆದಿದ್ದರು.

ಇದೀಗ ರೂಪಾಲಿ ಜೊತೆ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಿಜಿಸ್ಟರ್ ಮದುವೆಯಾಗಿರುವ ಜೋಡಿಗೆ ಹಾರೈಸಲು ಕೆಲವೇ ಕೆಲವು ಆಪ್ತರು ಮಾತ್ರ ಇದ್ದರು ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ