ಹಲ್ಲೆಗೊಳಗಾದ ನಟಿ ಸಂಯುಕ್ತಾ ಹೆಗಡೆಗೆ ಚಿತ್ರರಂಗದ ಬೆಂಬಲ

ಶನಿವಾರ, 5 ಸೆಪ್ಟಂಬರ್ 2020 (10:29 IST)
ಬೆಂಗಳೂರು: ಪಾರ್ಕ್ ನಲ್ಲಿ ವರ್ಕೌಟ್ ಮಾಡುತ್ತಿದ್ದಾಗ ಡ್ರೆಸ್ ವಿಚಾರಕ್ಕೆ ಮಹಿಳೆಯೊಬ್ಬರು ಕಿರಿಕ್ ತೆಗೆದು ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ನಟಿ ಸಂಯುಕ್ತಾ ಹೆಗಡೆಗೆ ನಟ ರಕ್ಷಿತ್ ಶೆಟ್ಟಿ, ನಿರ್ಮಾಪಕ ಕಾರ್ತಿಕ್ ಗೌಡ ಬೆಂಬಲಿಸಿದ್ದಾರೆ.


ಟ್ವಿಟರ್ ಮೂಲಕ ಸಂಯುಕ್ತಾ ತಮಗಾದ ಕರಾಳ ಅನುಭವವನ್ನು ವಿಡಿಯೋ ಸಮೇತ ಬಿಚ್ಚಿಟ್ಟಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ಮಾಪಕ ಕಾರ್ತಿಕ್ ಗೌಡ ಯಾರಿಗೂ ಇನ್ನೊಬ್ಬರ ವೈಯಕ್ತಿಕ ಉಡುಗೆ ತೊಡುಗೆಗಳನ್ನು ಪ್ರಶ್ನಿಸುವ, ಈ ರೀತಿ ಹಲ್ಲೆ ಮಾಡುವ ಅಧಿಕಾರವಿಲ್ಲ. ಈ ವಿಚಾರದಲ್ಲಿ ನಾನು ಸಂಯುಕ್ತಾಗೆ ಬೆಂಬಲ ಸೂಚಿಸುತ್ತೇನೆ ಎಂದಿದ್ದಾರೆ. ಇನ್ನು, ನಟ ರಕ್ಷಿತ್ ಶೆಟ್ಟಿ ಕೂಡಾ ಈ ಘಟನೆಯ ವಿಡಿಯೋಗಳನ್ನು ರಿಟ್ವೀಟ್ ಮಾಡಿ ಸಂಯುಕ್ತಾಗೆ ಬೆಂಬಲ ಸೂಚಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ