ಡ್ರಗ್ ಮಾಫಿಯಾ: ಶರ್ಮಿಳಾ ಮಾಂಡ್ರೆ ಅಪಘಾತ ಪ್ರಕರಣಕ್ಕೆ ಮರುಜೀವ

ಶನಿವಾರ, 5 ಸೆಪ್ಟಂಬರ್ 2020 (09:53 IST)
ಬೆಂಗಳೂರು: ಲಾಕ್ ಡೌನ್ ವೇಳೆ ಮಧ‍್ಯರಾತ್ರಿ ವೇಳೆ ಕಾರು ಅಪಘಾತ ಮಾಡಿಕೊಂಡಿದ್ದ ನಟಿ ಶರ್ಮಿಳಾ ಮಾಂಡ್ರೆಗೆ ಈಗ ಅದೇ ಉರುಳಿಗೆ ಸಿಲುಕಿಕೊಂಡಿದ್ದಾರೆ.

 

ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ಮಾಫಿಯಾ ಕುರಿತಂತೆ ಶರ್ಮಿಳಾ ಹೆಸರು ಕೂಡಾ ಕೇಳಿಬಂದಿತ್ತು. ಲಾಕ್ ಡೌನ್ ವೇಳೆ ಕಾರು ಅಪಘಾತವಾದಾಗ ಶರ್ಮಿಳಾ ಜತೆ ಡ್ರಗ್ ಪೆಡ್ಲರ್ ಇದ್ದರು ಎಂಬಿತ್ಯಾದಿ ವಿಚಾರಗಳು ಓಡಾಡುತ್ತಿವೆ. ಇದನ್ನು ಶರ್ಮಿಳಾ ನಿರಾಕರಿಸಿದ್ದರು.

ಆದರೆ ಈ ಬಗ್ಗೆ ಈಗ ಸಿಸಿಬಿ ವಿಚಾರಣೆ ನಡೆಸಲಿದೆ. ಹೀಗಾಗಿ ಅಂದು ಆಗಿದ್ದ ಆಕ್ಸಿಡೆಂಟ್ ಪ್ರಕರಣಕ್ಕೆ ಮರು ಜೀವ ಸಿಗಲಿದೆ. ಸದ್ಯಕ್ಕೆ ಶರ್ಮಿಳಾ ಕೊರೋನಾ ನೆಪ ಹೇಳಿದ್ದು, ಗುಣಮುಖರಾದ ಬಳಿಕ ವಿಚಾರಣೆಗೊಳಪಡಿಸುವ ಸಾಧ‍್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ