ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಇತ್ತೀಚೆಗೆ ಜೈಲೂಟ ಸೇರುತ್ತಿಲ್ಲ ಎಂದಿದ್ದರು. ಜೈಲೂಟ ಸೇರುತ್ತಿಲ್ಲ ಎಂದಿದ್ದಕ್ಕೆ ಈಗ ದರ್ಶನ್ ಗೆ ಈಗ ಜೈಲಿಗೆ ಕೆಜಿಗಟ್ಟಲೆ ಫ್ರೂಟ್ ಬಂದಿದೆ.
ನಟ ದರ್ಶನ್ ಮನೆ ಆಹಾರ ಕೊಡಿ ಎಂದು ಈಗಾಗಲೇ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅದಕ್ಕೆ ಕೋರ್ಟ್ ನಿಂದ ಇನ್ನೂ ಅನುಮತಿ ಸಿಕ್ಕಿಲ್ಲ. ಇದರ ವಿಚಾರಣೆಯನ್ನು ಹೈಕೋರ್ಟ್ ಜುಲೈ 18 ಕ್ಕೆ ಮುಂದೂಡಿದೆ. ಕೋರ್ಟ್ ಅನುಮತಿ ನೀಡದೇ ನಾವು ಮನೆ ಆಹಾರ ಕೊಡಲು ಒಪ್ಪಿಗೆ ನೀಡಲ್ಲ ಎಂದು ಜೈಲು ಅಧಿಕಾರಿಗಳೂ ಹೇಳಿದ್ದಾರೆ.
ಕೈದಿಗಳಿಗೆ ಮನೆಯವರು ನಿಯಮದ ಪ್ರಕಾರ ಹಣ್ಣುಗಳನ್ನು ಮಾತ್ರ ನೀಢಬಹುದಾಗಿದೆ. ಹೀಗಾಗಿ ಜೈಲೂಟ ಸೇರುತ್ತಿಲ್ಲ ಎಂದ ದರ್ಶನ್ ಗೆ ಅವರ ಆಪ್ತರು ಎಲ್ಲಾ ರೀತಿಯ ಕೆಜಿಗಟ್ಟಲೆ ಹಣ್ಣನ್ನು ತಂದಿದ್ದಾರೆ. ಬಾಳೆಹಣ್ಣು, ಪಪ್ಪಾಯ, ಮೂಸಂಬಿ ಸೇರಿದಂತೆ ವಿವಿಧ ಹಣ್ಣುಗಳನ್ನು ಅವರ ಆಪ್ತರು ಮತ್ತು ಅಕ್ಕನ ಮಗ ಇಂದು ಜೈಲಿಗೆ ತಂದಿದ್ದಾರೆ.
ಇದಕ್ಕೆ ಮೊದಲು ನಿನ್ನೆ ದರ್ಶನ್ ಅಕ್ಕನ ಮಗ ಡ್ರೈ ಫ್ರೂಟ್ಸ್ ಗಳನ್ನು ತಂದಿದ್ದರು. ಆದರೆ ಇದನ್ನು ಕೊಡಲು ಜೈಲು ಅಧಿಕಾರಿಗಳು ನಿರಾಕರಿಸಿದ್ದಾರೆ. ಕೇವಲ ಹಣ್ಣುಗಳನ್ನು ಮಾತ್ರ ನೀಡಬಹುದು ಎಂದಿದ್ದರು. ಹೀಗಾಗಿ ಇಂದು ಹಣ್ಣುಗಳನ್ನು ತಂದಿದ್ದಾರೆ. ಜೈಲೂಟ ಮಾಡಿ ಅಜೀರ್ಣ ಸಮಸ್ಯೆಯಾಗುತ್ತಿದೆ, ಬೇಧಿಯಾಗುತ್ತಿದೆ ಎಂದು ದರ್ಶನ್ ಅಳಲು ತೋಡಿಕೊಂಡಿದ್ದಾರೆ.