ಧಾರಾವಾಹಿಗಳ ಶೂಟಿಂಗ್ ಆರಂಭಕ್ಕೆ ಗ್ರೀನ್ ಸಿಗ್ನಲ್

ಮಂಗಳವಾರ, 5 ಮೇ 2020 (16:01 IST)
ಟಿವಿ ಹಾಗೂ ಧಾರವಾಹಿಗಳ ಪ್ರಿಯರಿಗೆ ಸಂತಸದ ಸುದ್ದಿಯನ್ನು ಲಾಕ್ ಡೌನ್ ಮೂರನೇ ಹಂತದ ವಿಸ್ತರಣೆಯಾಗಿರುವ ನಡುವೆ ಸರಕಾರ ನೀಡಿದೆ.

ಮನೆಯೊಳಗೆ ಮಾತ್ರ ಶೂಟಿಂಗ್ ಮಾಡೋವಂತೆ ಧಾರವಾಹಿಗಳ ಚಿತ್ರೀಕರಣಕ್ಕೆ ಅನುಮತಿ ಕೊಡಲಾಗಿದೆ.

ಹೀಗಂತ ಸಚಿವ ಆರ್.ಅಶೋಕ್ ತಿಳಿಸಿದ್ದು, ಯಾವುದೇ ಕಾರಣಕ್ಕೂ ಹೊರಗಡೆ ಶೂಟಿಂಗ್ ಮಾಡುವಂತಿಲ್ಲ ಎಂದು ತಿಳಿಸಿದ್ದಾರೆ.

ಕೊರೊನಾ ವೈರಸ್ ತಡೆಗೆ ಜಾರಿಮಾಡಿರುವ ಕ್ರಮಗಳನ್ನು ಚಿತ್ರೀಕರಣ ವೇಳೆ ಅನುಸರಿಸಬೇಕು ಎಂದು ಅವರು ಹೇಳಿದ್ದಾರೆ.

ಹೀಗಾಗಿ ಲಾಕ್ ಡೌನ್ ಇದ್ದಾಗ ಹಳೇ ಧಾರವಾಹಿಗಳನ್ನು ಮತ್ತೆ ಮತ್ತೆ ನೋಡುತ್ತಿದ್ದ ಧಾರವಾಹಿಗಳ ಪ್ರಿಯರು ಇನ್ನುಮುಂದೆ ಹೊಸ ಎಪಿಸೋಡ್ ಗಳನ್ನು ನೋಡಬಹುದು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ