ಕನ್ನಡದ ನಾಯಕಿಯರನ್ನು ಲಾಂಚ್ ಮಾಡುವ ಖ್ಯಾತಿ ದೊಡ್ಮನೆಯದ್ದು!

ಭಾನುವಾರ, 4 ಡಿಸೆಂಬರ್ 2022 (08:50 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಅನೇಕ ಹೀರೋಯಿನ್ ಗಳನ್ನು ಲಾಂಚ್ ಮಾಡಿದ ಖ್ಯಾತಿ ಡಾ.ರಾಜ್ ಕುಮಾರ್ ಕುಟುಂಬದ್ದು.

ರಮ್ಯಾ, ರಕ್ಷಿತಾ, ಶ್ರುತಿ, ಸುಧಾರಾಣಿ ಸೇರಿದಂತೆ ಇಂದಿನ ಅನೇಕ ಖ್ಯಾತ ನಟಿಯರು ಲಾಂಚ್ ಆಗಿದ್ದು ದೊಡ್ಮನೆ ಮೂಲಕ. ವಿಶೇಷವೆಂದರೆ ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್ ನಾಯಕರಾಗಿ ಎಂಟ್ರಿ ಕೊಟ್ಟ ಸಿನಿಮಾಗಳಲ್ಲಿ ಕನ್ನಡ ಮೂಲದ ಹೊಸ ನಟಿಯರನ್ನು ಪರಿಚಯಿಸಲಾಗಿದ್ದು, ಅವರೆಲ್ಲರೂ ಸಕ್ಸಸ್ ಕಂಡಿದ್ದಾರೆ.

ಇದೀಗ ಯುವರಾಜ್ ಕುಮಾರ್ ನಾಯಕರಾಗಿ ಲಾಂಚ್ ಆಗುತ್ತಿರುವ ಸಿನಿಮಾಗೆ ಕನ್ನಡದ ಕುವರಿ, ರಿಯಲ್ ಸ್ಟಾರ್ ಉಪೇಂದ್ರ ಪುತ್ರಿ ಐಶ್ವರ್ಯಾ ಲಾಂಚ್ ಆಗಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಈ ಮೊದಲು ಡಾ.ರಾಜ್ ಕುಟುಂಬದ ಕುಡಿಗಳ ಚೊಚ್ಚಲ ಸಿನಿಮಾಗಳಲ್ಲಿ ಲಾಂಚ್ ಆದ ಹೀರೋಯಿನ್ ಗಳಂತೇ ಐಶ್ವರ್ಯಾರನ್ನು ಲಾಂಚ್ ಮಾಡಿದರೆ ಅವರಿಗೂ ಅದೃಷ್ಟ ಕುದುರಬಹುದಾ? ಕಾದು ನೋಡಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ