90 ಲಕ್ಷ ರೂ.ಗಳಲ್ಲಿ ಮಾಡಿದ್ದ ಮಠ ಸಿನಿಮಾ ಬಾಚಿಕೊಂಡಿದ್ದು ಇಷ್ಟು ಲಾಭ!

ಶನಿವಾರ, 28 ನವೆಂಬರ್ 2020 (10:14 IST)
ಬೆಂಗಳೂರು: ಗುರುಪ್ರಸಾದ್-ಜಗ್ಗೇಶ್ ಕಾಂಬಿನೇಷನ್ ನ ಮಠ ಸಿನಿಮಾ ಒಂದು ಕಾಲದಲ್ಲಿ ಭಾರೀ ಹಿಟ್ ಆಗಿದ್ದ, ಹೊಸ ಟ್ರೆಂಡ್ ಹುಟ್ಟು ಹಾಕಿದ್ದ ಸಿನಿಮಾ. ಈ ಸಿನಿಮಾ ಅಂದು ಮಾಡಿದ್ದ ಲಾಭವೆಷ್ಟು ಗೊತ್ತಾ?


90 ಲಕ್ಷ ರೂ.ಗಳಲ್ಲಿ ಆ ಸಿನಿಮಾ ತಯಾರಾಗಿತ್ತಂತೆ. ಆದರೆ ಕೊನೆಗೆ ಅಂದು ಸಂಪಾದನೆ ಮಾಡಿದ್ದು ಬರೋಬ್ಬರಿ 5 ಕೋಟಿ ರೂ.ಗಳಂತೆ. ಹೀಗಂತ ಸ್ವತಃ ಜಗ್ಗೇಶ್ ಬಹಿರಂಗಪಡಿಸಿದ್ದಾರೆ. 25 ದಿನಗಳಲ್ಲಿ ಚಿತ್ರೀಕರಣ ಮುಗಿದಿತ್ತು. 13 ವರ್ಷದ ಹಿಂದೆ 5 ಕೋಟಿ ಗಳಿಕೆ ಮಾಡಿದ ಸಿನಿಮಾವಿದು ಎಂದು ಜಗ್ಗೇಶ್ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ