ಕಾಂತಾರ 2 ಗಾಗಿ ಕಳರಿಪಯಟ್ಟು, ಕುದುರೆ ಸವಾರಿ ಕಲಿಯುತ್ತಿರುವ ರಿಷಬ್ ಶೆಟ್ಟಿ

ಗುರುವಾರ, 22 ಜೂನ್ 2023 (16:36 IST)
ಬೆಂಗಳೂರು: ಕಾಂತಾರ 1 ಸಕ್ಸಸ್ ನಂತರ ನಟ, ನಿರ್ದೇಶಕ ರಿಷಬ್ ಶೆಟ್ಟಿ ಮೇಲೆ ನಿರೀಕ್ಷೆ ಭಾರೀ ಹೆಚ್ಚಾಗಿದೆ. ದೇಶದಾದ್ಯಂತ ಈ ಸಿನಿಮಾದ ಎರಡನೇ ಭಾಗಕ್ಕಾಗಿ ಕಾಯುತ್ತಿದೆ.

ಹೀಗಾಗಿ ರಿಷಬ್ ಎರಡನೇ ಪಾರ್ಟ್ ತಯಾರಿಗೆ ಹೆಚ್ಚಿನ ಸಿದ್ಧತೆ ನಡೆಸಿದ್ದಾರೆ. ಈಗಷ್ಟೇ ಸ್ಕ್ರಿಪ್ಟ್ ಕೆಲಸಗಳನ್ನು ಮುಗಿಸಿದ್ದಾರೆ ಎನ್ನಲಾಗಿದೆ. ಇದೀಗ ರಿಷಬ್ ಕಾಂತಾರ 2 ಪಾತ್ರಕ್ಕಾಗಿ ಭಾರೀ ಸಿದ್ಧತೆ ನಡೆಸಿದ್ದಾರೆ.

ಎರಡನೇ ಪಾರ್ಟ್ ಗಾಗಿ ಕೇರಳದ ಸಾಹಸ ಕಲೆ ಕಳರಿಪಯಟ್ಟು, ಕುದುರೆ ಸವಾರಿ ಅಭ್ಯಾಸ ಮಾಡುತ್ತಿದ್ದಾರಂತೆ. ಕಾಂತಾರ 2 ಕಾಂತಾರ ಮೊದಲ ಭಾಗದ ಹಿಂದಿನ ಕತೆ ಎಂದು ರಿಷಬ್ ಈಗಾಗಲೇ ಹೇಳಿದ್ದರು. ಹೀಗಾಗಿ ಈಗ ರಿಷಬ್ ತಯಾರಿ ಬಗ್ಗೆ ಕೇಳಿದರೆ ಕಾಂತಾರ 2 ಎಷ್ಟು ಅದ್ಭುತವಾಗಿ ಹೊರತರಲು ರಿಷಬ್ ಪ್ರಯತ್ನ ನಡೆಸಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಮೂಲಗಳ ಪ್ರಕಾರ ಆಗಸ್ಟ್ ಕೊನೆಯಲ್ಲಿ ಚಿತ್ರದ ಮುಹೂರ್ತ ಕಾರ್ಯಕ್ರಮ ನಡೆಯಲಿದೆ. ಆದರೆ ಇನ್ನೂ ಯಾವುದೂ ಅಧಿಕೃತವಾಗಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ