ಕನ್ನಡತಿ ರಂಜನಿ ರಾಘವನ್ ಹೊಸ ಸಿನಿಮಾ: ಆದಿತ್ಯಗೆ ನಾಯಕಿ

ಗುರುವಾರ, 22 ಜೂನ್ 2023 (16:21 IST)
ಬೆಂಗಳೂರು: ಕನ್ನಡತಿ ಧಾರವಾಹಿ ಖ್ಯಾತಿಯ ನಟಿ ರಂಜಿನಿ ರಾಘವನ್ ಸದ್ದಿಲ್ಲದೇ ಒಂದು ಸಿನಿಮಾ ಒಪ್ಪಿಕೊಂಡಿದ್ದು, ಶೂಟಿಂಗ್ ಹಂತದಲ್ಲಿದೆ.

ರಂಜಿನಿ ರಾಘವನ್ ನಾಯಕಿಯಾಗಿರುವ ಆದಿತ್ಯ ಸಿಂಗ್ ಬಾಬು ನಾಯಕರಾಗಿದ್ದಾರೆ. ಚಿತ್ರದ ಟೈಟಲ್ ಇನ್ನೂ ರಿವೀಲ್ ಆಗಿಲ್ಲ. ಆದರೆ ಈಗಾಗಲೇ 17 ದಿನಗಳ ಚಿತ್ರೀಕರಣ ಮಾಡಲಾಗಿದೆ.

ಸದ್ಯಕ್ಕೆ ರಂಜಿನಿ ಮಧ್ಯಪ್ರದೇಶದಲ್ಲಿ ಪ್ರವಾಸದಲ್ಲಿದ್ದು ಅಲ್ಲಿಂದ ಬಂದ ಮೇಲೆ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಸಿನಿಮಾವನ್ನು ಕಿಶೋರ್ ಮೇಗಳಮನೆ ನಿರ್ದೇಶನ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ