ಲುಂಗಿ ಧರಿಸಿ ಸುತ್ತಾಡಿದ ಸಲ್ಲು ಭಾಯ್‌

ಶನಿವಾರ, 3 ಡಿಸೆಂಬರ್ 2022 (18:51 IST)
ನಟ ಸಲ್ಮಾನ್ ಖಾನ್ ಇತ್ತೀಚೆಗೆ ಮುಂಬೈನಲ್ಲಿ ಶೂಟಿಂಗ್ ಮುಗಿಸಿ ಕಪ್ಪು ಲುಂಗಿಯಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಸಲ್ಮಾನ್‌ ಖಾನ್‌ ಕಪ್ಪು ಬಣ್ಣದ ಲುಂಗಿ ಧರಿಸಿದ್ದಾರೆ. ಈ ವಿಡಿಯೋ ಕ್ಲಿಪ್‌ನಲ್ಲಿ ಸಲ್ಮಾನ್ ತನ್ನ ತಂಡ ಮತ್ತು ಭದ್ರತಾ ಸಿಬ್ಬಂದಿಯೊಂದಿಗೆ ನಡೆದುಕೊಂಡು ಹೋಗುವುದನ್ನು ಕಾಣಬಹುದು. ಅನೇಕರು ಈ ವಿಡಿಯೋವನ್ನು ಲೈಕ್‌ ಮಾಡಿದ್ದಾರೆ. ಅಲ್ಲದೇ ಕೆಲವರು ಕಾಮೆಂಟ್‌ ಕೂಡ ಮಾಡಿದ್ದಾರೆ. "ತುಂಬಾ ಹಾಟ್ ಆಗಿ ಕಾಣಿಸುತ್ತಿದ್ದಾರೆ. ಕಪ್ಪು ಬಣ್ಣವು ಸೂಟ್‌ ಆಗುತ್ತೆ" ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. ಇದು ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಶೂಟಿಂಗ್‌ಗಾಗಿಯೇ?" ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. "ಊರಿನಲ್ಲಿರುವ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್‌" ಎಂದು ಕೆಲವರು ಹೇಳಿದ್ದಾರೆ. ಇತ್ತೀಚೆಗೆ ಅಬುಧಾಬಿಯಲ್ಲಿ ನಡೆದ 23ನೇ IIFA ಪ್ರಶಸ್ತಿ ಸುದ್ದಿಗೋಷ್ಠಿಯಿಂದ ಹಿಂತಿರುಗಿದ ನಂತರ ಸಲ್ಮಾನ್ ಈ ರೀತಿ ಕಾಣಿಸಿಕೊಂಡಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ