ಯಶ್​ ಅವರಿಂದ ಐರಾ ಪ್ರೊಡಕ್ಷನ್ ಸಂಸ್ಥೆ?

ಶನಿವಾರ, 3 ಡಿಸೆಂಬರ್ 2022 (17:48 IST)
ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾ ಬಗ್ಗೆ ವಿಪರೀತ ಕುತೂಹಲವಿದೆ. ಕನ್ನಡಿಗರು ಮಾತ್ರವಲ್ಲದೆ ದೇಶವೇ ಯಶ್ ಅವರ ಮುಂದಿನ ಸಿನಿಮಾ ನಿರೀಕ್ಷೆಯಲ್ಲಿದೆ. ಇದೀಗ ಯಶ್ ಅವರು ಮಗಳು ಐರಾ ಹೆಸರಿನಲ್ಲಿ ಪ್ರೊಡಕ್ಷನ್ ಸಂಸ್ಥೆ ಕಟ್ಟುತ್ತಿದ್ದು, ಅದರಲ್ಲೇ ಮುಂದಿನ ಸಿನಿಮಾ ಮಾಡ್ತಾರೆ ಎನ್ನುವ ಸುದ್ದಿ ಕೇಳಿ ಬಂದಿದೆ. ತಮ್ಮ ಮುದ್ದಿನ ಮಗಳ ಹೆಸರಲ್ಲಿ ನಿಜಕ್ಕೂ ಯಶ್ ಪ್ರೊಡಕ್ಷನ್ ಹೌಸ್ ನಿರ್ಮಿಸ್ತಿದ್ದಾರಾ? ಅದರ ಕೆಲಸಗಳು ಎಲ್ಲಿಗೆ ಬಂತು ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಹಾಗೊಂದು ವೇಳೆ ಪ್ರೊಡಕ್ಷನ್ ಹೌಸ್ ಹುಟ್ಟುಹಾಕಿದರೆ ಇದು ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ದೊಡ್ಡ ನಿರ್ಮಾಣ ಸಂಸ್ಥೆಯಾಗಿ ಹೊರಹೊಮ್ಮುವ ಸಾಧ್ಯತೆ ಇದೆ. ಇದರ ಬಗ್ಗೆ ನಟ ಯಶ್​ ಇದುವರೆಗೆ ಯಾವುದೇ ಹೇಳಿಕೆ ಕೊಟ್ಟಿಲ್ಲ ಅಥವಾ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ