ಕೆಜಿಎಫ್ ಸಿನಿಮಾದ ಆ ಒಂದು ಖಡಕ್ ಡೈಲಾಗ್ ಬರೆದಿದ್ದ ಸ್ಟಾರ್ ಯಾರು ಗೊತ್ತೇ?

ಭಾನುವಾರ, 5 ಜನವರಿ 2020 (09:19 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ ಸಿನಿಮಾದ ಡೈಲಾಗ್ ಗಳು ಭಾರೀ ಜನಪ್ರಿಯವಾಗಿತ್ತು. ಆ ಸಿನಿಮಾದ ಒಂದು ಡೈಲಾಗ್ ಅಂತೂ ಈಗಲೂ ಜನ ಮರೆತಿಲ್ಲ.


ಅದೂ ಅಮ್ಮನ ಬಗ್ಗೆ ಹೇಳುವ ಡೈಲಾಗ್. ಪ್ರಪಂಚದಲ್ಲಿ ತಾಯಿಗಿಂತ ದೊಡ್ಡ ಯೋಧರು ಯಾರೂ ಇಲ್ಲ ಎಂದು ಯಶ್ ಹೇಳುವ ಆ ಡೈಲಾಗ್ ಬರೆದ ಸ್ಟಾರ್ ಯಾರು ಗೊತ್ತೇ?

ಸ್ವತಃ ರಾಕಿಂಗ್ ಸ್ಟಾರ್ ಯಶ್ ಈ ಡೈಲಾಗ್ ಬರೆದಿದ್ದರಂತೆ. ಆ ಸಿನಿಮಾದಲ್ಲಿ ಎಷ್ಟೇ ಹೊಡೆಬಡಿಯ ದೃಶ್ಯವಿದ್ದರೂ ತಾಯಿ ಬಗ್ಗೆ ಸೆಂಟಿಮೆಂಟ್ ಕತೆಯಿದೆ. ಈ ಕತೆಗೆ ಕಳಶವಿಟ್ಟಂತಹ ಡೈಲಾಗ್ ಅದಾಗಿತ್ತು. ಆದರೆ ಅದನ್ನು ಬರೆದಿದ್ದು ಯಶ್ ಎಂಬುದು ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ