ಯುವತಿಯನ್ನು ನಿಂದಿಸಿದ ಆರೋಪಿ ಬಂಧನ

ಮಂಗಳವಾರ, 29 ಆಗಸ್ಟ್ 2023 (18:12 IST)
ಅನ್ಯ ಧರ್ಮದ ಹುಡುಗನ ಜೊತೆ ಹೋಗುತ್ತಿದ್ದಕ್ಕೆ ಮುಸ್ಲಿಂ ಯುವತಿಗೆ ಕೆಟ್ಟದಾಗಿ ನಿಂದಿಸಿದ್ದ ಮುಸ್ಲಿಂ ಯುವಕನನ್ನು ಬೆಂಗಳೂರು ಪೂರ್ವ ವಿಭಾಗದ ಸೆನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೋಲಾರ ಜಿಲ್ಲೆ ಬಂಗಾರಪೇಟೆ ಮೂಲದ ಜಾಕೀರ್ ಅಹಮ್ಮದ್ ಬಂಧಿತ ಆರೋಪಿ. ಮುಸ್ಲಿಂ ಯುವತಿ, ಬೈಕ್​ನಲ್ಲಿದ್ದ ಯುವಕ ಇಬ್ಬರು ಪರಿಚಿತರು. ಇಬ್ಬರೂ ಕಂಪನಿಯೊಂದಕ್ಕೆ ಸಂದರ್ಶನ ನೀಡಲು ಹೋಗಿದ್ದರು. ಸಂದರ್ಶನ ಮುಗಿದ ಬಳಿಕ ಯುವತಿಯನ್ನು ಮನೆಗೆ ಡ್ರಾಪ್ ಮಾಡಲು ಯುವಕ ಹೋಗುತ್ತಿದ್ದ. ಮುಸ್ಲಿಂ ಯುವತಿ ಅನ್ಯಧರ್ಮಿಯ ಯುವಕನ ಜೊತೆಗೆ ಹೋಗುತ್ತಿದ್ದಿದ್ದನ್ನು ನೋಡಿದ ಆರೋಪಿ ಜಾಕೀರ್, ಕಾರಿನಿಂದ ಬೈಕ್ ಅಡ್ಡಗಟ್ಟಿದ್ದಾನೆ. ನಂತರ ಯುವತಿಯನ್ನು ಕೆಟ್ಟದಾಗಿ ನಿಂದಿಸಿದ್ದಾನೆ. ಅಲ್ಲದೇ ಬುರ್ಖಾ ತೆಗೆಯುವಂತೆ ಒತ್ತಾಯಿಸಿದ್ದಾನೆ. ತಾನು ಮಾಡುತ್ತಿರುವ ಕೃತ್ಯದ ಬಗ್ಗೆ ತಾನೇ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆ ಹಿಡಿದು ಸೋಷಿಯಲ್ ಮೀಡಿಯಾದಲ್ಲಿ‌ ಹರಿಬಿಟ್ಟಿದ್ದಾನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ