ಸಮಾಜದ ಶಾಂತಿಯನ್ನ ಕದಡುತ್ತಾರೆ ,ಅವರ ಮೇಲೆ ಕ್ರಮ ಕೈಗೊಳ್ತಿವಿ -ಜಿ.ಪರಮೇಶ್ವರ್

ಗುರುವಾರ, 1 ಜೂನ್ 2023 (21:01 IST)
ನಮ್ಮ ಕಚೇರಿಯ ಪೂಜೆ ಮಾಡಿದ್ದೇವೆ.ಅನೇಕ ಜನ ಟೀಕೆ‌ಟಿಪ್ಪಣೆ ಮಾಡಬಹುದು.ದೇವರ ಹೆಸರಲ್ಲಿ ಪ್ರಮಾಣ ವಚನ ತಗೋತ್ತಿವಿ.ದೇವರನ್ನ ನೆನೆಸಿಕೊಂಡು ಕಚೇರಿ ಪೂಜೆ ಮಾಡಿದ್ದೇವೆ.ಇದು ನಮ್ಮೆಲ್ಲರಿಗೂ ಶಕ್ತಿ ಕೊಡುವಂತದ್ದು,ರಾಜ್ಯದ ಕಾನೂನು ವ್ಯವಸ್ಥೆಯನ್ನ ಮುಖವಾಣಿಯಲ್ಲಿ ಗೃಹ ಖಾತೆ ಬಹಳ ಪ್ರಾಮುಖ್ಯವಾದದ್ದು ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.
 
ಇಲ್ಲಿ ಏನೇ ವಿದ್ಯಾಮಾನಗಳು ನಡೆದ್ರು ಜನತೆಗೆ ಮುಟ್ಟುತ್ತೆ.ಇಲ್ಲಿಂದ‌ ಒಳ್ಳೆಯ ಕೆಲಸಗಳಾಗಲಿ.ಕ್ಯಾಬಿನೆಟ್ ನಲ್ಲಿ ಗ್ಯಾರಂಟಿ ಯೋಜನೆ ಬಗ್ಗೆ ಬ್ರೀಫ್ ಮಾಡ್ತಿವಿ.ಈಗ ಏನೆ ಹೇಳುದ್ರು ಅಪ್ರಸ್ತುತವಾಗುತ್ತೆ ಎಂದು ಹೇಳಿದ್ರು.ಅಲ್ಲದೇ ಈ ವೇಳೆ ಬಜರಂಗ ದಳ ನಿಷೇದ ಮಾಡೊ ವಿಚಾರವಾಗಿ ಪ್ರತಿಕ್ರಿಯಿಸಿದ್ದು,ನಮ್ಮ ಪ್ರಣಾಳಿಕೆಯಲ್ಲಿ ಸರಿಯಾಗಿ ನೋಡಬೇಕು.ಯಾರು ಸಮಾಜದ  ಶಾಂತಿಯನ್ನ ಕದಡುತ್ತಾರೆ .ಅವರ ಮೇಲೆ ಕ್ರಮ ಕೈಗೊಳ್ತಿವಿ ಅಂತಾ ಹೇಳಿದ್ದೇವೆ.ಅವರು ಮಾಡೋದಿಲ್ಲಾ ಅಂದ ಮೇಲೆ ಅವರಿಗೆ ಯಾಕೆ  ವರಿ.ಕಾನೂನು ಬ್ರೇಕ್ ಮಾಡೋಲ್ಲಾ ಅಂದ್ರೆ ಯಾಕೆ ಭಯ.ಅದು ಅವರಿಗೆ ಅರ್ಥ ಆದ್ರೆ ಸಾಕು ಎಂದು ಪರಮೇಶ್ವರ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ