ಮಹಿಳೆಗೆ ಯಾಮಾರಿಸಿದ್ದ ಕ್ಯಾಬ್ ಚಾಲಕ ಅಂದರ್..!

ಶುಕ್ರವಾರ, 4 ಆಗಸ್ಟ್ 2023 (16:30 IST)
ಕ್ಯಾಬ್ ಚಾಲಕರ ಕಿರಿಕ್, ಪ್ರಯಾಣಿಕರ ಜೊತೆ ಅಸಭ್ಯ ವರ್ತನೆ ಕೇಸ್ ಗಳು ಆಗಾಗ ಬೆಳಕಿಗೆ ಬರ್ತಾನೆ ಇರ್ತಾವೆ.. ಆದರೆ ನಾವೀಗಾ ಹೇಳೋ ಸ್ಟೋರಿ ನೀವು ಎಂದು ಕೇಳಿರೋದಿಲ್ಲ ಅನ್ಸುತ್ತೆ... ಹೌದು ಈ ಫೋಟೋದಲ್ಲಿ ಕಾಣಿಸುತ್ತಿರುವ ಈತನ ಹೆಸರು ಕಿರಣ್ ಕುಮಾರ್ ಅಂತಾ.. ಹೆಸರಘಟ್ಟ ನಿವಾಸಿಯಾದ ಈತ ಕ್ಯಾಬ್ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ. ತನ್ನ ಪಾಡಿಗೆ ತಾನು ಕೆಲಸ ಮಾಡಿಕೊಂಡು ಇದ್ದಿದ್ರೆ ಈಗ ಪೊಲೀಸರ ಅತಿಥಿಯಾಗುತ್ತಿರಲಿಲ್ಲ.. ಆದರೆ ಈತ ಮಾಡಿದ್ದು ಮಾತ್ರ‌ ಖತರ್ನಾಕ್ ಕೆಲಸ..
ಖಾಸಗಿ‌ ಕಂಪನಿಯಲ್ಲಿ ಕೆಲಸ‌ ಮಾಡುತ್ತಿರುವ ಮಹಿಳೆ ಕಳೆದ ವರ್ಷ ನವೆಂಬರ್ ನಲ್ಲಿ ಇಂದಿರಾನಗರದಿಂದ ಬಾಣಸವಾಡಿಗೆ ಕ್ಯಾಬ್ ಬುಕ್ ಮಾಡಿದ್ದಳು. ಕ್ಯಾಬ್ ನಲ್ಲಿ ಹೋಗುವಾಗ ಮೊಬೈಲ್‌ ನಲ್ಲಿ ತನ್ನ ಕ್ಲಾಸ್ ಮೇಟ್ ಆಗಿದ್ದ ಸ್ನೇಹಿತನ ವಿಚಾರಗಳನ್ನ ಮಾತನಾಡುವಾಗ ಸೂಕ್ಷ್ಮವಾಗಿ ಈತ ಕದ್ದಾಲಿಸಿದ್ದ. ಇದಾದ ಬಳಿಕ ಈತ ಮಾಡಿದ್ದು ಮಾತ್ರ ಸಿನಿಮಾ ಶೈಲಿಯ ಯಾಮಾರಿಸೋ ಕೆಲಸ.. ಕೆಲವು ದಿನಗಳ ಬಳಿಕ ಸ್ನೇಹಿತನ ಸೋಗಿನಲ್ಲಿ ಮಹಿಳೆಗೆ ಕರೆ ಮಾಡಿದ್ದ ಕಿರಣ್, ನಾನು‌ ನಿನ್ನ ಬಾಲ್ಯ ಸ್ನೇಹಿತ ಅಂತಾ ಎಂದು ಪರಿಚಯ ಮಾಡಿಕೊಂಡಿದ್ದ.

ಫೋನ್ ಸಂಪರ್ಕದಲ್ಲಿ  ಮಹಿಳೆಗೆ ಹತ್ತಿರವಾದ ಮೇಲೆ ಈ ಕಿರಣ್ ನಾನು ಆರ್ಥಿಕ ಸಂಕಷ್ಟದಲ್ಲಿದ್ದೇನೆ ಹಣದ ಅಗತ್ಯವಿದೆ ಎಂದು‌ ನಂಬಿಸಿದ್ದ. ಸ್ನೇಹಿತ ಅಂತಾ ಕಷ್ಟಕ್ಕೆ ಸ್ಪಂದಿಸಿದ ಮಹಿಳೆ ಆನ್ ಲೈನ್ ಮೂಲಕ ಕಿರಣ್ ಬ್ಯಾಂಕ್ ಖಾತೆಗೆ 22 ಲಕ್ಷ ಹಣ ಹಾಕಿದ್ಲು. ಆದರೆ ಪದೇ ಪದೇ ಹಣ ಕೇಳಲು ಈ ಕಿರಣ್ ಶುರು ಮಾಡಿದ್ದ. ಹೀಗಾಗಿ ಮ ಮಹಿಳೆಗೆ ಈತನ ಮೇಲೆ ಅನುಮಾನ ಬಂದಿತ್ತು. ತನ್ನೊಂದಿಗೆ ಮಾತನಾಡುತ್ತಿರುವುದು ಬಾಲ್ಯ ಸ್ನೇಹಿತನಲ್ಲ ಎಂದು ಗೊತ್ತಾಗುತ್ತಿದ್ದಂತೆ ಕಿರಣ್ ಜೊತೆ ಮಾತನಾಡುವುದನ್ನೇ ನಿಲ್ಲಿಸಿದ್ದಳು. ಆದರೆ ಇಷ್ಟಕ್ಕೆ ಸುಮ್ಮನಾಗದ ಈ ಕಿರಣ್ ನಿನ್ನ ಬಳಿಯಿರುವ ಚಿನ್ನಾಭರಣಗಳನ್ನ ನೀಡದಿದ್ದರೆ ಸ್ನೇಹಿತನೊಂದಿಗಿನ ವಿಚಾರಗಳನ್ನ ಗಂಡನಿಗೆ ಹೇಳುವುದಾಗಿ ಬೆದರಿಸಿದ್ದಾನೆ. ಇದರಿಂದ ದಾರಿ ತೋಚದ‌ ಮಹಿಳೆ ಕಿರಣ್ ಗೆ ತನ್ನ ಬಳಿಯಿದ್ದ 750 ಗ್ರಾಂ ಚಿನ್ನವನ್ನ ಕಳೆದ‌ ಏಪ್ರಿಲ್ ನಲ್ಲಿ ನೀಡಿದ್ದಳು.ಈ ಬಗ್ಗೆ ಅರಿತ ಮಹಿಳೆಯ ಪತಿ ವಂಚನೆ  ಸಂಬಂಧ ರಾಮಮೂರ್ತಿನಗರ ಪೊಲೀಸರಿಗೆ ದೂರು ನೀಡಿದ್ದರು. 

 ಇನ್ನೂ ಪ್ರಕರಣ  ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಮಹಿಳೆಯಿಂದ ಪಡೆದ ಹಣವನ್ನು ಕಿರಣ್ ಕುಮಾರ್ ಮೋಜು,ಮಸ್ತಿ‌ ಮಾಡಿ ಚಿನ್ನಾಭರಣವನ್ನು ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಅಡವಿಟ್ಟಿದ್ದ. ಸದ್ಯ ಚಿನ್ನಾಭರಣ ಸೀಜ್ ಮಾಡಿ‌ರುವ ಪೊಲೀಸರು ಕಿರಣ್ ಕುಮಾರ್ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಅದೆನೇ ಇರಲಿ..  ಅನ್ಯರ ಮುಂದೆ ಫೋನ್ ನಲ್ಲಿ ಮಾತನಾಡುವಾಗ ಎಚ್ಚರವಾಗಿರಬೇಕು.. ಇಲ್ಲದಿದ್ದರೆ ಕಿರಣ್ ಕುಮಾರ್ ಅಂತವರು ಇದನ್ನೇ ಅಸ್ತ್ರ ಮಾಡಿಕೊಂಡು ಉಂಡೆನಾಮ ಹಾಕೋದಂತು ಸುಳ್ಳಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ