ಬೆಂಗಳೂರಿನಲ್ಲಿ ಕಾವೇರಿ ನೀರು ಕಳ್ಳರಿಗೆ ಶಾಕ್..!

ಸೋಮವಾರ, 11 ಡಿಸೆಂಬರ್ 2023 (14:00 IST)
ಅಕ್ರಮ ನೀರಿನ ಸಂಪರ್ಕ ಪಡೆದ ಸಿಲಿಕಾನ್ ಸಿಟಿ ಜನರ ಮೇಲೆ ಕಾನೂನು ಅಸ್ತ್ರ ಕೈಗೊಳ್ಳಲಾಗಿದೆ.ಅನಧಿಕೃತ ಸಂಪರ್ಕ ಪಡೆದ ಜನರೇ ಇನ್ಮೇಲೆ ಹುಷಾರಾಗಿರಬೇಕು.ಇನ್ಮೇಲೆ ಅಕ್ರಮ ನೀರಿನ ಸಂಪರ್ಕ ಪಡೆದಿದ್ರೆ ದಂಡ ಅಲ್ಲ.. ಜೈಲು ಶಿಕ್ಷೆ ಅನುಭವಿಸಬೇಕಾಗುತ್ತೆ.ಬೆಂಗಳೂರಿನಲ್ಲಿ ಅನಧಿಕೃತ ಕಾವೇರಿ ನೀರಿನ ಸಂಪರ್ಕ ಶಿಕ್ಷಾರ್ಹ ಅಪರಾಧವಾಗಿದೆ.ಆದ್ರೂ ಕಾವೇರಿ ನೀರು ಕಳ್ಳತನ ಮಾಡ್ತಿರೋ ಸಿಲಿಕಾನ್ ಸಿಟಿ ಜನ ಎಚ್ಚರವಹಿಸಬೇಕು.
 
ಅನಧಿಕೃತ ಸಂಪರ್ಕ ಪಡೆದವರ ಮೇಲೆ ಕಾನೂನು ಕ್ರಮಕ್ಕೆ ಸನ್ನದ್ದ.ಬೆಂಗಳೂರು ನಗರದಲ್ಲಿ ಸಾವಿರಾರು ಮಂದಿ ಅನಧಿಕೃತ ನೀರಿನ ಸಂಪರ್ಕ ಪಡೆದುಕೊಂಡಿದ್ದಾರೆ.ರಾಜಧಾನಿಯಲ್ಲಿ ಶೇ 35 ರಷ್ಟು ನೀರು ಲೆಕ್ಕಕ್ಕೆ ಸಿಗ್ತಿಲ್ಲ.ಅನಧಿಕೃತ ಸಂಪರ್ಕಗಳನ್ನ ಪತ್ತೆಗೆ ವಿಶೇಷ ತಂಡ ರಚನೆ ಇದ್ರೂ ಕೇವಲ ದಂಡಕ್ಕೆ ಮಾತ್ರ ಸೀಮಿತ.ಇಷ್ಟು ದಿನ ಜಲಮಂಡಳಿ ಇಂಜಿನಿಯರ್ಸ್ ದಂಡ ಹಾಕಿ ಸೈಲೆಂಟ್ ಆಗುತ್ತಿದ್ರು.ಇದೀಗ ಅನಧಿಕೃತ ನೀರಿನ ಸಂಪರ್ಕ ಪಡೆದವರ ಮೇಲೆ ಎಫ್ ಐಆರ್ ದಾಖಲಿಸುವಂತೆ ಜಲಮಂಡಳಿ ಅಧ್ಯಕ್ಷರು ಸೂಚನೆ ನೀಡಿದ್ದಾರೆ.ಜಲಮಂಡಳಿ ಎಲ್ಲಾ ಇಂಜಿನಿಯರ್ ಗಳಿಗೆ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಖಡಕ್ ಸೂಚನೆ ಕೊಟ್ಟಿದ್ದಾರೆ.
 
ಅನಧಿಕೃತ ನೀರಿನ ಸಂಪರ್ಕ ಪಡೆದಿದ್ರೆ  ಎಫ್ಐಆರ್ ದಾಖಲು ಮಾಡಲು ಅಧಿಕಾರಿಗಳಿಗೆ ಕಟ್ಟಿನಿಟ್ಟಿನ ಸೂಚನೆ ನೀಡಿದ್ದು,ಬೆಂಗಳೂರಿನಲ್ಲಿ 12 ಲಕ್ಷಕ್ಕೂ ಹೆಚ್ಚಿನ ಕಾವೇರಿ ನೀರಿನ ಸಂಪರ್ಕಗಳಿವೆ.ಪ್ರತಿನಿತ್ಯ ಕಾವೇರಿ ನದಿಯಿಂದ 1450 ಎಂಎಲ್ ಡಿ ನೀರು ಪೂರೈಕೆಯಾಗಲಿದೆ.ಮುಂದಿನ ಬೇಸಿಗೆಯಲ್ಲಿ ನೀರಿನ ಕೊರತೆ ಭೀತಿ ಇದೆ.ಹೀಗಾಗಿ ಅನಧಿಕೃತ ನೀರಿನ ಸಂಪರ್ಕ ಪಡೆದವರ ಮೇಲೆ ಕಾನೂನು ಸಮರಸಾರಲಿದ್ದು,ಇನ್ಮೇಲೆ ಅನಧಿಕೃತ ನೀರಿನ ಸಂಪರ್ಕ ಹೊಂದಿದ್ದರೆ ಕ್ರಿಮಿನಲ್ ಕೇಸ್ ದಾಖಲಾಗುತ್ತದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ