ನಮ್ಮ ಮೆಟ್ರೋ ಟಿಕೆಟ್ ಬೆಲೆ ಏರಿಕೆ ಬೇಕಿತ್ತಾ, ಬೆಂಗಳೂರು ತುಂಬಾ ವಾಯುಮಾಲಿನ್ಯ, ಟ್ರಾಫಿಕ್

Krishnaveni K

ಗುರುವಾರ, 6 ಮಾರ್ಚ್ 2025 (09:52 IST)
ಬೆಂಗಳೂರು: ನಮ್ಮ ಮೆಟ್ರೋ ಟಿಕೆಟ್ ಬೆಲೆ ಏರಿಕೆ ಮಾಡಿದ್ದೇ ಮಾಡಿದ್ದು, ಈಗ ಬೆಂಗಳೂರಿನಲ್ಲಿ ವಾಯುಮಾಲಿನ್ಯ, ಟ್ರಾಫಿಕ್ ಹೆಚ್ಚಾಗಿದೆ ಎಂದು ವರದಿ ಬಂದಿದೆ.

ಕಳೆದ ತಿಂಗಳಷ್ಟೇ ಏಕಾಏಕಿ ಮೆಟ್ರೋ ಪ್ರಯಾಣ ದರ ಏರಿಕೆಯಾಗುತ್ತದೆ. ಏಕಾಏಕಿ ಟಿಕೆಟ್ ದರ ದುಪ್ಪಟ್ಟಾಗಿದ್ದರಿಂದ ಮಧ್ಯಮ ವರ್ಗದ ಜನ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದರು. ಹಲವರು ನಿತ್ಯ ಅನಿವಾರ್ಯವಾಗಿ ಸಂಚರಿಸುವವರನ್ನು ಬಿಟ್ಟರೆ ಉಳಿದವರು ಮೆಟ್ರೋಗೆ ಗುಡ್ ಬೈ ಹೇಳಿದ್ದಾರೆ.

ಇತ್ತೀಚೆಗೆ ಮೆಟ್ರೋ ನಿಲ್ದಾಣಗಳಲ್ಲಿ ಮೊದಲಿನಷ್ಟು ಪ್ರಯಾಣಿಕರಿಲ್ಲ. ಹಲವು ಜನ ಮೆಟ್ರೋ ಬಳಸುವುದನ್ನೇ ಬಿಟ್ಟಿದ್ದಾರೆ. ಮೆಟ್ರೋ ಪ್ರಯಾಣ ದರ ಏರಿಕೆಯಾಗಿರುವುದರಿಂದ ಅನೇಕರು ಖಾಸಗಿ ವಾಹನ, ಕ್ಯಾಬ್ ಇಲ್ಲವೇ ಬಸ್ ಕಡೆಗೆ ಮುಖ ಮಾಡಿದ್ದಾರೆ.

ಇದರಿಂದಾಗಿ ನಗರದಲ್ಲಿ ಈಗ ಖಾಸಗಿ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಇದರಿಂದಾಗಿ ಟ್ರಾಫಿಕ್ ಜಾಮ್ ಹೆಚ್ಚಾಗಿದೆ. ಸಹಜವಾಗಿಯೇ ವಾಹನಗಳ ದಟ್ಟಣೆಯಿಂದ ನಗರದಲ್ಲಿ ವಾಯುಮಾಲಿನ್ಯವೂ ಮಿತಿ ಮೀರಿದೆ. ನಗರದಲ್ಲಿ ಟ್ರಾಫಿಕ್ ದಟ್ಟಣೆ ಕಡಿಮೆ ಮಾಡಬೇಕು ಆ ಮೂಲಕ ವಾಯುಮಾಲಿನ್ಯ ಕಡಿಮೆ ಮಾಡಬೇಕು ಎಂಬ ಉದ್ದೇಶದಿಂದಲೇ ಮೆಟ್ರೋ ಆರಂಭಿಸಲಾಗಿತ್ತು. ಆದರೆ ಈಗ ಆ ಉದ್ದೇಶವೇ ಈಡೇರುತ್ತಿಲ್ಲ. ಹಾಗಿದ್ದ ಮೇಲೆ ಮೆಟ್ರೋದಿಂದ ಏನು ಉಪಯೋಗವಾಯ್ತು ಎಂದು ಜನ ಕೇಳುವಂತಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ