ಮತ್ತೆ ಪ್ರಾಥಮಿಕ ಶಾಲಾ ಹಂತದಲ್ಲಿ ಬೋರ್ಡ್ ಎಕ್ಸಾಂ ನಡೆಯುವ ಸಾಧ್ಯತೆ..!
10ನೇ ತರಗತಿ ಮಾತ್ರವಲ್ಲ ಈ ವರ್ಷ 5, 8 ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸುವ ಸಾಧ್ಯತೆ ಇದೆ.ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಲಿದೆ.ಈ ಹಿಂದೆ ಪಬ್ಲಿಕ್ ಪರೀಕ್ಷೆ ನಡೆಸುವ ಕುರಿತು ಚರ್ಚೆ ಆಗಿತ್ತು.ಸಭೆಯಲ್ಲಿ ಎಸ್ ಎಸ್ ಎಲ್ ಸಿ ಗೆ ಮಾತ್ರ ಬೋರ್ಡ್ ಪರೀಕ್ಷೆ ಸಾಕು ಎಂದಿದ್ದರು. ಆದ್ರೆ ಆಗ ಪ್ರಾಥಮಿಕ ಹಂತದಲ್ಲಿ ಬೋರ್ಡ್ ಪರೀಕ್ಷೆ ಬೇಡವೆಂದು ಅಭಿಪ್ರಾಯಪಟ್ಟಿತ್ತು.ಇದೀಗ ಮತ್ತೆ ಬೋರ್ಡ್ ಎಕ್ಸಾಂ ಮುನ್ನಲೆಗೆ ಬಂದಿದೆ.ಕಳೆದ ವಾರ ಸಾಕ್ಷರತಾ ಶಿಕ್ಷಣ ಇಲಾಖೆಯಲ್ಲಿ ಸಭೆಯಲ್ಲಿ ಚರ್ಚೆಯಾಗಿತ್ತು.ಸಭೆಯಲ್ಲಿ ಕಲಿಕಾ ಗುಣಮಟ್ಟ ಪರಿಶೀಲಿಸಲು ಬೋರ್ಡ್ ಎಕ್ಸಾಂ ಅವಶ್ಯಕ ಎಂಬ ಅಭಿಮತವಿತ್ತು.ಈ ಕುರಿತು ಅ.12ರಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ.ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು, ರಾಜ್ಯ ಪ್ರೌಢಶಿಕ್ಷಣ ಮಂಡಳಿ ಆಯುಕ್ತರು, ಶಿಕ್ಷಣ ತಜ್ಞರು ಸಭೆಯಲ್ಲಿ ಭಾಗಿಯಾಗಲಿದ್ದಾರೆ.ಪರೀಕ್ಷೆಯ ರೂಪುರೇಷೆ ಕುರಿತು ಸಭೆಯಲ್ಲಿ ನಿರ್ಧಾರ ಮಾಡಲಿದ್ದಾರೆ.