ಸಮ್ಮಿಶ್ರ ಸರ್ಕಾರ ಎಷ್ಟು ದಿನ ಇರುತ್ತೆ ಎಂಬುದು ಕಾಂಗ್ರೆಸ್ ನಾಯಕರ ಕೈಯಲ್ಲಿದೆ- ದೇವೇಗೌಡರಿಂದ ಹೊಸ ಬಾಂಬ್

ಶುಕ್ರವಾರ, 21 ಜೂನ್ 2019 (10:00 IST)
ಬೆಂಗಳೂರು : ಸಮ್ಮಿಶ್ರ ಸರ್ಕಾರ ಎಷ್ಟು ದಿನ ಇರುತ್ತದೆಯೋ ಗೊತ್ತಿಲ್ಲ. ಎಲ್ಲವೂ ಕಾಂಗ್ರೆಸ್ ಪಕ್ಷದ ಮುಖಂಡರ ಕೈಯಲ್ಲೇ ಇದೆ ಎಂದು ಜೆಡಿಎಸ್ ವರಿಷ್ಠ ದೇವೇಗೌಡರು ಹೊಸ ಬಾಂಬ್ ಸಿಡಿಸಿದ್ದಾರೆ.




ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣದಲ್ಲಿ ಏಳು ಬೀಳು ಇದ್ದೇ ಇರುತ್ತದೆ. ನನ್ನ ಜೊತೆಗೆ ಇದ್ದು ನನ್ನ ಜೊತೆಗೆ ಬೆಳೆದವರು ಬಿಟ್ಟು ಹೋದರು. ಆದರೂ ಸಹ ನಾನು ದೃತಿಗೆಡದೆ ಮುಂದೆ ಬಂದಿದ್ದೇನೆ. ಮೈತ್ರಿ ಸರ್ಕಾರ ಮಾಡಲೇಬೇಕು ಎಂದು ನನಗೆ ಇರಲಿಲ್ಲ. ದೆಹಲಿ ನಾಯಕರು ನಿಮ್ಮ ಮಗನನ್ನು ಸಿಎಂ ಮಾಡಬೇಕೆಂದು ಬಂದಿದ್ದರು. ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಲೋಕಸಭೆ ಚುನಾವಣೆ ನಂತರ ಶಕ್ತಿಯನ್ನು ಕಳೆದುಕೊಂಡಿದೆ. ನಮ್ಮ ಪಕ್ಷದ ಪಾಲಿನ ಮಂತ್ರಿ ಸ್ಥಾನವನ್ನು ಅವರು ತೆಗೆದುಕೊಂಡಿದ್ದಾರೆ. ಎಲ್ಲವನ್ನು ಸಹಿಸಿಕೊಂಡು ಹೋಗುತ್ತಿದ್ದೇನೆ. ಏನಾದರೂ ಮಾತನಾಡಿದ್ನಾ? ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.


ಯಡಿಯೂರಪ್ಪ ಮುಖ್ಯಮಂತ್ರಿ ಆಗಬಾರದೆಂದು ಕಾಂಗ್ರೆಸ್ ನವರು ಓಡಿಬಂದರು. ಹಿಂದೆ ಮುಂದೆ ನೋಡದೆ ಸರ್ಕಾರ ರಚನೆಗೆ ಮುಂದಾದರು. ಆದರೆ ದೋಸ್ತಿ ಸರ್ಕಾರದಲ್ಲಿ ಏನೂ ಸರಿ ಇಲ್ಲ. ಮಧ್ಯಂತರ ಚುನಾವಣೆ  ನಡೆಯೋ ಬಗ್ಗೆ ಸಂಶಯ ಇಲ್ಲ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ