ಕಾನೂನು ಮುರಿದರೆ ಕಾಲು ಮುರಿದೀತು ಜೋಕೆ ಎಂದು ಡಿಸಿಎಂ ಹೇಳಿದ್ದೇಕೆ?

ಶನಿವಾರ, 15 ಡಿಸೆಂಬರ್ 2018 (15:50 IST)
ಕಾನೂನು ಮುರಿಯುವವರಿಗೆ ಪೊಲೀಸರು ಗುಂಡು ಹಾರಿಸಿ ಕಾಲು ಮುರಿಯಲಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ರೌಡಿ ಚಟುವಟಿಕೆಗಳು, ಅಪರಾಧ ಕೃತ್ಯಗಳು ಬೇರೆಯವರಿಗೆ ತೊಂದರೆ ಕೊಟ್ಟು ಕಾನೂನು ಮುರಿಯುವ ಕೆಲಸಕ್ಕೆ ಯಾರೂ ಮುಂದಾಗಬಾರದು ಎಂದ ಅವರು, ಗಂಭೀರ ಪ್ರಮಾಣದ ಅಪರಾಧ ಕೃತ್ಯಗಳಲ್ಲಿ ತೊಡಗುವವರಿಗೆ ಗುಂಡು ಹಾರಿಸಿ ಕಾಲು ಮುರಿಯಿರಿ, ನಾವೇನು ಗುಂಡು ಹಾಕಬೇಡಿ ಎಂದು ಹೇಳುವುದಿಲ್ಲ ಎಂದು ಪೊಲೀಸರಿಗೆ ಅಭಯ ನೀಡಿದರು.

ದೇವರಜೀವನಹಳ್ಳಿಯ ಪೊಲೀಸ್ ಠಾಣೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಗೃಹ ಸಚಿವರೂ ಆಗಿರುವ ಪರಮೇಶ್ವರ್, ಗಂಭೀರ ಸ್ವರೂಪದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಆರೋಪಿಗಳಿಗೆ ಮೊದಲು ಜೈಲಿಗೆ ಹಾಕಲಾಗುತ್ತಿತ್ತು. ಬಿಡುಗಡೆಯಾಗಿ ಬಂದ ಬಹುತೇಕ ಮಂದಿ ಮತ್ತೆ ಅಪರಾಧ ಕೃತ್ಯಗಳನ್ನು ನಡೆಸುವುದು ಸಾಮಾನ್ಯವಾಗಿತ್ತು. ಇದನ್ನು ತಪ್ಪಿಸಲು ಪೊಲೀಸರು ಕಾಲಿಗೆ ಗುಂಡು ಹಾರಿಸುವ ಹೊಸವ್ಯವಸ್ಥೆ ಕಂಡುಕೊಂಡಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಅಪರಾಧ ಕೃತ್ಯಗಳಲ್ಲಿ ತೊಡಗುವವರು ಜೈಲಿಗೆ ಹೋಗುವುದಲ್ಲದೆ ಕಾಲು ಮುರಿದುಕೊಂಡು ಜೀವನ ಪರ್ಯಂತ ನೋವು ಅನುಭವಿಸುತ್ತಾರೆ. ಹೀಗಾಗಿ, ಅಪರಾಧ ಕೃತ್ಯಗಳನ್ನು ಬಿಡುವುದು ಒಳ್ಳೆಯದು ಎಂದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ