ಇಂದು ಪಾದಯಾತ್ರೆಗೆ ಚಾಲನೆ: ಡಿಕೆಶಿ

ಭಾನುವಾರ, 27 ಫೆಬ್ರವರಿ 2022 (11:24 IST)
ರಾಮನಗರ :  ಇಂದು ಪಾದಯಾತ್ರೆಗೆ ಚಾಲನೆ ನೀಡುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
 
ಮೇಕೆದಾಟು 2.0 ಪಾದಯಾತ್ರೆಗೆ ಇಂದು ಚಾಲನೆ ಹಿನ್ನೆಲೆ, ಡಿಕೆಶಿ ಅವರು ನಿನ್ನೆ ರಾತ್ರಿ ರಾಮನಗರ ಜಾನಪದ ಲೋಕದ ಬಳಿ ಇರುವ ಬಿಜಿಎಸ್ ಮಠದಲ್ಲಿ ವಾಸ್ತವ್ಯ ಹೂಡಿದ್ದರು. ಪಾದಯಾತ್ರೆಗೂ ಮುನ್ನ ಡಿಕೆಶಿ ಮಠದಲ್ಲಿ ದೇವರಿಗೆ ಪೂಜೆ ಸಲ್ಲಿಸಿ ಅನ್ನದಾನೇಶ್ವರ ಶ್ರೀಗಳ ಆಶೀರ್ವಾದ ಪಡೆದುಕೊಂಡಿದ್ದರು. 

ಮೇಕೆದಾಟು 2.0 ಪಾದಯಾತ್ರೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶುಭ ಭಾನುವಾರ, ಶುಭ ಗಳಿಗೆಯಲ್ಲಿ ಇಂದು ಪಾದಯಾತ್ರೆಗೆ ಚಾಲನೆ ನೀಡ್ತಿದ್ದೇವೆ. ಆದಿ ಚುಂಚನಗಿರಿ ಶಾಖಾ ಮಠದ ಅನ್ನದಾನೇಶ್ವರ ಶ್ರೀಗಳ ಆಶೀರ್ವಾದ ಪಡೆದು ಹೆಜ್ಜೆ ಹಾಕಲಿದ್ದೇನೆ.

ನಗರದ ಚಾಮುಂಡೇಶ್ವರಿ ದೇವಾಲಯ ಹಾಗೂ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಲಾಗುವುದು ಎಂದು ತಮ್ಮ ಕಾರ್ಯಕ್ರಮದ ಬಗ್ಗೆ ವಿವರಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ