ಪಟಾಕಿ ಹಚ್ಚಿ ರಸ್ತೆಯಲ್ಲಿ ಓಡಾಡುವವರ ಮೇಲೆಸೆದು ಪುಂಡಾಟ

ಬುಧವಾರ, 26 ಅಕ್ಟೋಬರ್ 2022 (14:21 IST)
ಪಟಾಕಿ ರಸ್ತೆಯಲ್ಲಿ ಓಡಾಡುವವರ ಮೈಮೇಲೆ ಎಸೆದು ಪುಂಡಾಟ ಮೆರೆದಿದ್ದಾರೆ.ಅದನ್ನ ಕೇಳಿದೇ ತಪ್ಪಾಯ್ತು ಅನ್ನಿಸುತ್ತೆ.ಯುವಕರ ಗುಂಪಿನಿಂದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾರೆ.ತಡರಾತ್ರಿ ಜ್ಞಾನಭಾರತಿ ವ್ಯಾಪ್ತಿಯ ಮಾರುತಿ ನಗರದಲ್ಲಿ ಈ ಘಟನೆ ನಡೆದಿದೆ.
 
ಮಹಾದೇವಸ್ವಾಮಿ ಎಂಬುವವರ ಮೇಲೆ ಸ್ಥಳಿಯ ಯುವಕರಿಂದ ಹಲ್ಲೆ ನಡೆದಿದೆ.ಕುತ್ತಿಗೆಯ ಮೂಳೆ ಮುರಿಯುವಂತೆ  ಪುಡಾರಿಗಳ ಗುಂಪು‌ ಹಲ್ಲೆ ಮಾಡಿದ್ದಾರೆ.ಬೆಳಿಗ್ಗೆಯಿಂದಲೂ ಏರಿಯಾದಲ್ಲಿ‌ ಪಟಾಕಿ ಸಿಡಿಸುತ್ತಿದ್ದ 7-8 ಯುವಕರ ಗುಂಪು ರಸ್ತೆಯಲ್ಲಿ ಓಡಾಡುವ ಮಹಿಳೆಯರು, ವೃದ್ಧರ ಮೇಲೆ ಪಟಾಕಿ ಎಸೆಯುತ್ತಿದ್ರು.ರಾತ್ರಿ ರಸ್ತೆಯಲ್ಲಿ ತೆರಳುತ್ತಿದ್ದ ಮಹಾದೇವಸ್ವಾಮಿ ಎಂಬುವವರ ಮೇಲೆಯೂ ಪಟಾಕಿ ಎಸೆದಿದ್ರು.ಪ್ರಶ್ನಿಸಿದ್ದಕ್ಕೆ ಪ್ಲಾಸ್ಟಿಕ್ ಟ್ರೇನಿಂದ ಮಹಾದೇವಸ್ವಾಮಿ ಮೇಲೆ ಹಲ್ಲೆ  ಮಾಡಿದ್ದಾರೆ.ಈ ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ‌ ಸೆರೆಯಾಗಿದೆ.ಹಲ್ಲೆಗೊಳಗಾದ ಮಹಾದೇವಸ್ವಾಮಿ ಜ್ಞಾನಭಾರತಿ ಠಾಣೆಗೆ ದೂರು ನೀಡಿದ್ದಾರೆ.ಸದ್ಯ ಮೂವರನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ