ಬೆಸ್ಕಾಂ ಗೆ ವಿದ್ಯುತ್ ಬಿಲ್ ಪಾವತಿಸದ ಸರ್ಕಾರಿ ಇಲಾಖೆಗಳು ಸಾಮಾನ್ಯರಿಗೊಂದು ನ್ಯಾಯ ಸರ್ಕಾರಿ ಇಲಾಖೆಗೆ ಒಂದು ನ್ಯಾಯ ಎನ್ನುವಂತೆ ವರ್ತಿಸುತ್ತಿದೆ. ಸರಿಯಾಗಿ ವಿದ್ಯುತ್ ಬಿಲ್‌ಪಾವತಿಸದ ಸರ್ಕಾರಿ ಇಲಾಖೆಗಳು ಬರೊಬ್ಬರಿ 5,653 ಕೋಟಿ ಬಾಕಿ ಉಳಿಸಿಕೊಂಡು ಬಂದಿದೆ.
ಜೂನ್ 30ರ ವರೆಗಿನ ಅಂಕಿಅಂಶಗಳ ಪ್ರಕಾರ, ಸರ್ಕಾರಿ ಇಲಾಖೆಯಿಂದ ಬೆಸ್ಕಾಂ ಗೆ ಬರೊಬ್ಬರಿ 5,653 ಕೋಟಿ ಬರಬೇಕಿದೆ. ಸಾಮಾನ್ಯರು ಬಿಲ್ ಪಾವತಿಸದೇ ಇದ್ದಲ್ಲಿ ನಿದ್ರಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತೆ. ಆದ್ರೆ ಸರ್ಕಾರಿ ಇಲಾಖೆಗಳು ನಿರಂತರವಾಗಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡೇ ಬರ್ತಿದೆ. ಇಷ್ಟಾದ್ರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿವೆ.