ಕುಟುಂಬದಲ್ಲಿ ಕೋಲಾಹಲ: ಹುಟ್ಟುಹಬ್ಬ ಆಚರಿಸದೇ ಇರಲು ನಿರ್ಧರಿಸಿದ ಎಚ್ ಡಿ ದೇವೇಗೌಡ
ದೇವೇಗೌಡರು ಮೇ 18 ರಂದು ಜನ್ಮದಿನ ಆಚರಿಸಿಕೊಳ್ಳುತ್ತಾರೆ. ಈ ಮೇ 18 ಕ್ಕೆ ಅವರು 91 ನೇ ವಯಸ್ಸಿಗೆ ಕಾಲಿಡಲಿದ್ದಾರೆ. ಈ ಇಳಿವಯಸ್ಸಿನಲ್ಲೂ ಅವರು ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದ್ದರು.
ಆದರೆ ಈಗ ಮೊಮ್ಮ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಮತ್ತು ಮಗ ಎಚ್ ಡಿ ರೇವಣ್ಣ ಮಹಿಳೆ ಅಪಹರಣ ಪ್ರಕರಣದಲ್ಲಿ ಸಿಲುಕಿಕೊಂಡು ಕುಟುಂಬದಲ್ಲಿ ದೊಡ್ಡ ಕೋಲಾಹಲವೇ ಏರ್ಪಟ್ಟಿದೆ. ಇಂತಹ ಸಂದರ್ಭದಲ್ಲಿ ಸಂಭ್ರಮ ಆಚರಿಸುವ ಮನಸ್ಸು ದೇವೇಗೌಡರ ಕುಟಂಬದಲ್ಲಿ ಇಲ್ಲ.
ಹೀಗಾಗಿ ಈ ಬಾರಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಯಾರೂ ಮನೆ ಹತ್ರ ಬರಬೇಡಿ ಎಂದು ದೇವೇಗೌಡರು ಮಾಧ್ಯಮ ಪ್ರಕಟಣೆ ನೀಡಿದ್ದಾರೆ. ಮೊಮ್ಮಗನ ಕೇಸ್ ಹೊರಬಿದ್ದ ಬಳಿಕ ದೇವೇಗೌಡರು ಸಾರ್ವನಿಕವಾಗಿ ಎಲ್ಲೂ ಕಾಣಿಸಿಕೊಂಡಿಲ್ಲ. ಈ ಘಟನೆ ಅವರಿಗೆ ತೀವ್ರ ನೋವುಂಟುಮಾಡಿದೆ ಎನ್ನಲಾಗಿದೆ.