ಕುಮಾರಸ್ವಾಮಿಗೆ ಹಂದಿ ಎಂದಿಲ್ಲ, ಇಂಗ್ಲಿಷ್ ನಲ್ಲಿ ಹೇಳಿದ್ರು: ಎಡಿಜಿಪಿ ಚಂದ್ರಶೇಖರ್ ಪರ ಸಿದ್ದರಾಮಯ್ಯ ಬ್ಯಾಟಿಂಗ್

Krishnaveni K

ಸೋಮವಾರ, 30 ಸೆಪ್ಟಂಬರ್ 2024 (09:18 IST)
Photo Credit: X
ಬೆಂಗಳೂರು: ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಮತ್ತು ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ನಡುವಿನ ವಾಕ್ಸಮರದ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಚಂದ್ರಶೇಖರ್ ಪರವಾಗಿ ಸಿಎಂ ಮಾತನಾಡಿದ್ದಾರೆ.

ಗಂಗೇನಹಳ್ಳಿ ಡಿನೋಟಿಫಿಕೇಷನ ಪ್ರಕರಣದ ಬಳಿಕ ಕುಮಾರಸ್ವಾಮಿ ಮತ್ತು ಚಂದ್ರಶೇಖರ್ ನಡುವೆ ಮಾತಿನ ಚಕಮಕಿ ನಡೆದಿದೆ. ಎಡಿಜಿಪಿ ಚಂದ್ರಶೇಖರ್ ಕೇಂದ್ರ ಸಚಿವರನ್ನು ಹಂದಿ ಎಂದು ಕೆಟ್ಟ ಶಬ್ಧಗಳಿಂದ ನಿಂದನೆ ಮಾಡಿದ್ದಾರೆ ಎಂದು ಆರೋಪವಾಗಿದೆ. ಇನ್ನೊಂದೆಡೆ ಕುಮಾರಸ್ವಾಮಿ, ಎಡಿಜಿಪಿ ಚಂದ್ರಶೇಖರ್ ಪೊಲೀಸ್ ವೇಷದಲ್ಲಿರುವ ಕ್ರಿಮಿನಲ್ ಎಂದಿದ್ದಾರೆ. ಅವರು ಯಾವೆಲ್ಲಾ ಅನಾಚಾರ ಮಾಡಿದ್ದಾರೆ ನನಗೆ ಗೊತ್ತು ಎಂದಿದ್ದಾರೆ.

ಇವರಿಬ್ಬರ ಜಿದ್ದಾಜಿದ್ದಿನ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಎಡಿಜಿಪಿ ಚಂದ್ರಶೇಖರ್ ಪರವಾಗಿ ಮಾತನಾಡಿರುವ ಅವರು ‘ಅವರು ಹಂದಿ ಎಂದಿಲ್ಲ. ಇಂಗ್ಲಿಷ್ ನಲ್ಲಿ ಬರ್ನಾರ್ಡ್ ಶಾ ಅವರ ಮಾತೊಂದನ್ನು ಉಲ್ಲೇಖಿಸಿದ್ದಾರಷ್ಟೇ’ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಇನ್ನೊಂದೆಡೆ ಕೇಂದ್ರ ಸಚಿವರ ವಿರುದ್ಧ ಕೀಳುಮಟ್ಟದ ಪದ ಪ್ರಯೋಗ ಮಾಡಿದ ಎಡಿಜಿಪಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಒಬ್ಬ ಕೇಂದ್ರ ಸಚಿವರ ವಿರುದ್ಧ ಇಂತಹ ಹೇಳಿಕೆ ನೀಡುವುದನ್ನು ಯಾವುದೇ ಕಾರಣಕ್ಕೂ ಕ್ಷಮಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ