ಯುವತಿಯ ಸಹೋದರನಿಗೆ ಅನ್ಯಕೋಮಿನ ಯುವಕ ಬೆದರಿಕೆ ಸಂದೇಶ ಕಳುಹಿಸಿದ್ದ. ನನ್ನ ಪ್ರೀತಿಸುವಂತೆ ನಿನ್ನ ಸಹೋದರಿಗೆ ಹೇಳು. ಇಲ್ಲದೇ ಹೋದರೆ ಆಕೆಯನ್ನು 24 ತುಂಡು ಮಾಡುವುದಾಗಿ ಬೆದರಿಕೆ ಸಂದೇಶ ಕಳುಹಿಸಿದ್ದ. ಯುವತಿಯ ಫೇಸ್ ಬುಕ್ ಖಾತೆ ಹ್ಯಾಕ್ ಮಾಡಿದ್ದ ವ್ಯಕ್ತಿ ಆಕೆಯ ಅಣ್ಣನಿಗೆ ಬೆದರಿಕೆ ಸಂದೇಶ ಕಳುಹಿಸಿದ್ದ. ಮುಸ್ಲಿಂ ಸಮುದಾಯದ ಆರೋಪಿ ಸುರತ್ಕಲ್ ನವನಾಗಿದ್ದ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು.
ಅದರಂತೆ ಸುರತ್ಕಲ್ ಪೊಲೀಸರು ಶಾರಿಕ್ ಎಂಬಾತನನ್ನು ಕರೆಸಿ ವಿಚಾರಣೆ ನಡೆಸಿದ್ದರು. ಆದರೆ ಸಾಕ್ಷ್ಯ ಸಿಗದ ಹಿನ್ನಲೆಯಲ್ಲಿ ಆತನನ್ನು ಬಿಟ್ಟು ಕಳುಹಿಸಿದ್ದರು. ಇದರಿಂದ ಮನನೊಂದ ಯುವತಿ, ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಪೊಲೀಸರಿಂದಲೂ ನ್ಯಾಯ ಸಿಗದೇ ಇರುವುದರಿಂದ ಈ ಕೃತ್ಯಕ್ಕೆ ಮುಂದಾಗಿರುವುದಾಗಿ ಬರೆದಿದ್ದಾಳೆ.
ಒಬ್ಬ ಮುಸ್ಲಿಮನ ಕೈಯಲ್ಲಿ ಅತ್ಯಾಚಾರವಾಗಿ ಸಾಯುವ ಬದಲು ಈಗಲೇ ಸಾಯುತ್ತೇನೆ. ಶಾರಿಕ್ ಮತ್ತು ನೂರ್ಜಾನ್ ಇಬ್ಬರನ್ನೂ ಬಿಡಬಾರದು ಎಂದು ಡೆತ್ ನೋಟ್ ನಲ್ಲಿ ಬರೆದಿದ್ದಾಳೆ. ನೂರ್ ಜಹಾನ್ ಎಂದರೆ ಶಾರಿಕ್ ನ ತಾಯಿ. ಯುವತಿಯ ಅಂಗಡಿಯ ಮುಂದೆಯೇ ಶಾರಿಕ್ ನ ಮನೆಯಿದೆ. ಆತನ ತಾಯಿ ನೂರ್ ಜಹಾನ್ ಮತ್ತು ಯುವತಿಯ ತಾಯಿ ನಡುವೆ ಆತ್ಮೀಯತೆಯಿತ್ತು. ಒಂದು ದಿನ ನೂರ್ ಜಹಾನ್ ಯುವತಿಯ ತಾಯಿ ಮನೆಗೇ ಬಂದು ನಿಮ್ಮ ಮಗಳನ್ನು ನನ್ನ ಮಗನಿಗೆ ಮದುವೆ ಮಾಡಿಕೊಡಿ ಎಂದೂ ಕೇಳಿದ್ದರಂತೆ. ಯುವತಿಯ ಅಂಗಡಿ ಸುತ್ತ ತಿರುಗುವುದು, ಅತ್ಯಾಚಾರ ಬೆದರಿಕೆ ಹಾಕುವುದು ಮಾಡುತ್ತಿದ್ದ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.