ಬೆಂಗಳೂರು: ಅಮಾಯಕ ವೃದ್ಧರನ್ನನೇ ಗುರಿಯಾಗಿರಿಸಿಕೊಂಡು ಅವರ ಖಾತೆಗೆ ಹಣ ಹಾಕುವುದಾಗಿ ನಂಬಿಸಿ ಫೇಕ್ ಮೆಸೇಜ್ ಕಳಿಸಿ ಹಣ ಪಡೆದು ಪರಾರಿಯಾಗುತ್ತಿದ್ದ ಖದೀಮನನ್ನು ಮಾಗಡಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.ಕ್ಯಾಷ್ ಡೆಪಾಸಿಟ್ ಸೌಲಭ್ಯ ಇರುವ ಎಟಿಎಂ ಗಳ ಆಸುಸಪಾಸಿನಲ್ಲೇ ಠಳಾಯಿಸುತ್ತಿದ್ದ ಸಾಹಿಲ್, ವೃದ್ಧರು ಬಂದೊಡನೆಯೇ ಅಲರ್ಟ್ ಆಗುತ್ತಿದ್ದ. ಅವರ ಬಳಿ ಹೋಗಿ ಅರ್ಜೆಂಟಾಗಿ ನಗದು ಹಣ ಬೇಕಿದೆ. ತನ್ನ ನಗದು ತೆಗೆಯುವ ಮಿತಿ ಮುಗಿದುಹೋಗಿದೆ ಎಂದು ಕಥೆ ಕಟ್ಟುತ್ತಿದ್ದ. ಅವರ ಹೆಸರು ಮತ್ತು ಅಕೌಂಟ್ ನಂಬರ್ ಪಡೆದು ಹಣ ವರ್ಗಾಯಿಸುವುದಾಗಿ ಹೇಳುತ್ತಿದ್ದ. ಅವರಿಂದ ಹಣ ಪಡೆದ ಬಳಿಕ ಅವರಿಗೆ ನಕಲಿ ಮೆಸೇಜೊಂದನ್ನು ಕಳಿಸಿ ಅಲ್ಲಿಂದ ಪರಾರಿಯಾಗುತ್ತಿದ್ದ. ಈತನ ವಿರುದ್ದ ಮಾಗಡಿ ರಸ್ತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೂ ಪ್ರಕರಣಗಳು ದಾಖಲಾಗಿತ್ತು.