ಬೆಂಗಳೂರು: ಶಿಕ್ಷಣ, ಸರ್ಕಾರೀ ಯೋಜನೆಗಳ ಫಲಾನುಭವಿಗಳಾಗಲು ಆದಾಯ ಪ್ರಮಾಣ ಪತ್ರ ಬೇಕಾಗುತ್ತದೆ. ಇದು ನಿಮ್ಮ ವಾರ್ಷಿಕ ಆದಾಯವೆಷ್ಟು ಎಂದು ದೃಢೀಕರಿಸುವ ಪ್ರಮಾಣ ಪತ್ರವಾಗಿದೆ. ಇದನ್ನು ಪಡೆಯುವುದು ಹೇಗೆ, ಯಾವುದೆಲ್ಲಾ ದಾಖಲೆಗಳು ಬೇಕಾಗುತ್ತವೆ ಎಂದು ನೋಡೋಣ.
ಭಾರತೀಯ ನಾಗರಿಕರಿಗೆ ವಾರ್ಷಿಕವಾಗಿ ಅವರ ಸಂಪಾದನೆಗೆ ತಕ್ಕುದಾಗಿ ಎಷ್ಟು ಆದಾಯವಿದೆ ಎಂದು ಪ್ರಮಾಣೀಕರಿಸಿ ನೀಡಲಾಗುವ ದಾಖಲೆ ಪತ್ರ ಆದಾಯ ಪತ್ರವಾಗಿದೆ. ಎಲ್ಲಾ ರೀತಿಯ ಸಬ್ಸಿಡಿ ಯೋಜನೆಗಳು, ಸರ್ಕಾರೀ ಯೋಜನೆಗಳ ಫಲ ಪಡೆಯಲು ಆದಾಯ ಪ್ರಮಾಣ ಪತ್ರ ಬೇಕಾಗುತ್ತದೆ.