ಬಿಜೆಪಿ ಬಿಟ್ಟು ನಾನು ಎಲ್ಲೂ ಹೋಗಲ್ಲ- ಮುನಿರತ್ನ

ಮಂಗಳವಾರ, 10 ಅಕ್ಟೋಬರ್ 2023 (18:38 IST)
ನಗರದಲ್ಲಿ ಮಾತನಾಡಿದ ಮುನಿರತ್ನ ನಾನು ಶಾಸಕ, ಅವರು ಸಂಸದ.ನಮ್ಮ‌ ಕ್ಷೇತ್ರದಲ್ಲಿ ಅಕ್ರಮ ಆಗಿದೆ ಅಲ್ವಾ.?ಇಬ್ಬರ ವಿರುದ್ಧವೂ ತನಿಖೆಯಾಗಲಿ.ನಾಳೆ ಎರಡು ಗಂಟೆಗೆ ಬರ್ತೀನಿ.ಎಲ್ಲಿದ್ದಾರೆ ಹೇಳಿ, ಹೋಗಿ ಅವರ ಕಾಲು ಹಿಡಿಯುತ್ತೇನೆ.ನನ್ನ ಕ್ಷೇತ್ರದ ಅನುದಾ‌ಕ್ಕೆ ನಾನು ಹೋಗಿ ಕಾಲು ಹಿಡಿಯುತ್ತೇನೆ.ರದ್ದುಗೊಳಿಸಿರೋ ಅನುದಾನ.ಹೊಸಕೆರೆ ಹಳ್ಳಿಯಲ್ಲಿ 56ಎಕರೆ ಕೆರೆಯಲ್ಲಿ ಹೊಲಸು ತುಂಬಿತ್ತು.ಅಲ್ಲಿ ಪಾರ್ಕ್ ಮಾಡಲು ಅನುದಾನ ತೆಗೆದುಕೊಂಡು ಹೋಗಿದ್ದು.ರಸ್ತೆ ಅಗಲೀಕರಣದ ಅನುದಾನಕ್ಕೂ ಕತ್ತರಿ ಹಾಕಲಾಗಿದೆ.
 
ಚುನಾವಣೆ ಮೊದಲೇ ಕಾಂಗ್ರೆಸ್ ಹೋಗಿದ್ರೆ ಈ ಪರಿಸ್ಥಿತಿ ಬರ್ತಿರಲಿಲ್ವಾ ಅನ್ನೋ ವಿಚಾರವಾಗಿ ಬಂದು ಬಿಡಿ ಬಂದು ಬಿಡಿ ಅಂದ್ರೆ ಎಲ್ಲಿಗೆ ಹೋಗಲಿ.ನಾನು ಬಿಜೆಪಿಯಲ್ಲಿ ಇದ್ದೇನೆ.ಬಿಜೆಪಿ ಬಿಟ್ಟು ನಾನು ಎಲ್ಲೂ ಹೋಗಲ್ಲ.ಯಾರು ಇರ್ತಾರೋ, ಇಲ್ಲವೋ ಗೊತ್ತಿಲ್ಲ.ಕೊನೆವರೆಗೂ ನಾನು ಬಿಜೆಪಿಯಲ್ಲೇ ಇರ್ತೀನಿ.66ಜನ ನಾವು ವಿರೋಧ ಪಕ್ಷದ ನಾಯಕರು.ಎಲ್ಲರೂ ವಿಪಕ್ಷ ನಾಯಕರಾಗೇ ಕೆಲಸ ಮಾಡ್ತೀವಿ.ವಿಪಕ್ಷ ನಾಯಕನ ಆಯ್ಕೆ ಮಾಡದ ವಿಚಾರವಾಗಿ ಸದಾನಂದಗೌಡರ ವಿರೋಧ ವಿಚಾರವಾಗಿ ಅವರ ಹೇಳಿಕೆಗೆ ನನ್ನ ವಿರೋಧ ಇದೆ.ಯಡಿಯೂರಪ್ಪ ಅವರನ್ನು ಕೆಳಗೆ ಇಳಿಸುವಾಗ ಅವರಿಗೆ ವಿರೋಧ ಇರಲಿಲ್ಲವಾ.ಆಗ ಯಾಕೆ ಪ್ರಶ್ನೆಮಾಡಲಿಲ್ಲ‌.ಡಿಕೆಶಿ ಜೈಲಿಗೆ ಹೋಗ್ತಾರೆ ಅಂದ್ರೆ ಕುಮಾರಸ್ವಾಮಿ ಅವರು ಮಾಜಿ ಸಿಎಂ.ಮಾಜಿ ಪ್ರಧಾನಿ ಅವರ ಮಗ.ಅವರಿಗೆ ಒಂದಷ್ಟು ವಿಚಾರ ಗೊತ್ತಿರಬೇಕು.ನಾನು ಕ್ಷೇತ್ರದ ಅನುದಾನ ಕೊಡಿ ಅಂತ ಸಿಎಂ ಬಳಿ ಹೋಗಲ್ಲ.ಡಿಸಿಎಂ ಹತ್ರ ಹೋಗ್ತೀನಿ.ಡಿಸಿಎಂ ಕಾಲನ್ನೇ ಹಿಡೀತೀನಿ.ಡಿಸಿಎಂ‌ ಅವರೇ ಬೆಂಗಳೂರಿನ ಸಿಎಂ.ಹೀಗಾಗಿ ಅವರ ಬಳಿಯೇ ಹೋಗ್ತೀನಿ ಎಂದು ಮುನಿರತ್ನ ಡಿಸಿಎಂ ಡಿಕೆ ಶಿವಕುಮಾರ್ ರವರನ್ನ ವ್ಯಂಗ್ಯ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ