2022-23ರಲ್ಲಿ 14,699 ಕೋಟಿ ವಿತ್ತೀಯ ಕೊರತೆ ಆಗಬಹುದೆಂದು ಅಂದಾಜಿಸಲಾಗಿತ್ತು. ಆದರೆ ಜವರಿವರೆಗೆ 5,996 ಕೋಟಿ ರೂ.ಗೆ ಕಡಿಮೆಗೊಳಿಸಲಾಗಿದೆ. 2023-24ರ ಆರ್ಥಿಕ ವರ್ಷದಲ್ಲಿ ಆದಾಯ ಹೆಚ್ಚಳ ಸಾಧಿಸುವ ಸಾಧ್ಯತೆ ಇದೆ. ಕರ್ನಾಟಕ ಆರ್ಥಿಕ ನಿರ್ವಹಣೆಯಲ್ಲಿ ಕ್ರಮಬದ್ಧತೆ ಸಾಧಿಸಿದೆ.
ಕೋವಿಡ್ ನಂತರದ ವರ್ಷದಲ್ಲಿ ರಾಜ್ಯದ ಆರ್ಥಿಕತೆ ಆದಾಯ ಹೆಚ್ಚಳವಾಗುತ್ತಿರುವುದು, ರಾಜ್ಯದ ಅಂತರ್ಗತವಾದ ಆರ್ಥಿಕ ಶಕ್ತಿ, ಜನರ ಪರಿಶ್ರಮದಿಂದ ಸಾಧ್ಯವಾಗಿರುವ ಕಾರಣ, ರಾಜ್ಯದ ಜನರನ್ನ ಅಭಿನಂದಿಸುತ್ತೇನೆ.
ಈ ಬಾರಿಯ 3.9 ಲಕ್ಷ ಕೋಟಿ ರೂ.ಗಳ ಬಜೆಟ್ ಮಂಡಿಸಲಾಗಿದೆ. ಕಳೆದ ಆಯವ್ಯಯಕ್ಕೆ ಹೋಲಿಸಿದರೆ ಶೇ.16 ರಷ್ಟು ಬಜೆಟ್ ಗಾತ್ರ ಹೆಚ್ಚಾಗಿದೆ. ಇದು ರಾಜ್ಯ ಆರ್ಥಿಕ ಪ್ರಗತಿಯ ವೇಗ ಉನ್ನತ ಮಟ್ಟದಲ್ಲಾಗುತ್ತಿರುವುದನ್ನು ನಿರೂಪಿಸುತ್ತದೆ ಎಂದು ವಿವರಿಸಿದರು.