ಅಂತಿಮ ದರ್ಶನ" ವೇಳೆ ಗಾಯಗೊಂಡ, ಕರ್ತವ್ಯ ನಿರತ ಪೊಲೀಸ್ ಕಾನ್ಸ್ಟೇಬಲ್

ಭಾನುವಾರ, 31 ಅಕ್ಟೋಬರ್ 2021 (21:36 IST)
ನಟ ಪುನೀತ್ ರಾಜಕುಮಾರ್ ಅವರ " ಅಂತಿಮ ದರ್ಶನ" ವೇಳೆ, ಕರ್ತವ್ಯ ನಿರ್ವಹಿಸುವಾಗ, ಅಭಿಮಾನಿಗಳ ದಟ್ಟಣೆ
ಯ ನೂಕು ನುಗ್ಗಲಿನಲ್ಲಿ ಸಿಲುಕಿ ಕಾಲು ಮುರಿತಕ್ಕೆ ಒಳಗಾದ, ಮಡಿವಾಳ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಶ್ರೀ ಗಣೇಶ್ ನಾಯಕ್, ಅವರ ಆರೋಗ್ಯವನ್ನು ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ರವರು, ದೂರವಾಣಿ ಮೂಲಕ, ವಿಚಾರಿಸಿದರು.
 
ಗಣೇಶ್ ನಾಯಕ್ ರವರಿಗೆ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ ಸಚಿವರು, ಇಲಾಖೆಯಿಂದ ಚಿಕಿತ್ಸಾ ವೆಚ್ಚವನ್ನು ಭರಿಸುವ ಹಾಗೂ ಉನ್ನತ ಚಿಕಿತ್ಸೆ ಬೇಕಿದ್ದರೆ ಅದನ್ನೂ ಒದಗಿಸುವ ಬಗ್ಗೆ ಭರವಸೆ ನೀಡಿದರು.
 
ನೋವಿನಲ್ಲೂ ಕರ್ತವ್ಯ ಪ್ರಜ್ಞೆ ಮೆರೆದ ಗಣೇಶ್ ನಾಯಕ್ ಅವರ ಬಗ್ಗೆ ಸಚಿವರು ಸಂತೋಷ ವ್ಯಕ್ತಪಡಿಸಿದರು.
 
ಗಣೇಶ್ ನಾಯಕ್ ಅವರು  ಮಲ್ಯ ಆಸ್ಪತ್ರೆ ಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು, ಪ್ರಸ್ತುತ ವೆಂಕಟೇಶ್ವರ ಆಸ್ಪತ್ರೆ ಹೊಸೂರ್ ರಸ್ತೆ ಬೆಂಗಳೂರು ನಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ