ಜಲ ಪ್ರಳಯಕ್ಕೆ ಹೇಳ ಹೆಸರಿಲ್ಲದಂತಾದ ಜೋಡುಪಾಲ ಪ್ರವಾಸಿ ತಾಣ

ಭಾನುವಾರ, 19 ಆಗಸ್ಟ್ 2018 (15:05 IST)
ಮಡಿಕೇರಿ- ಮಂಗಳೂರು ರಸ್ತೆಯಲ್ಲಿ ಹಾದು ಬರುವಾಗ ಕಣಿವೆ ಪ್ರದೇಶ ಕಾಣ ಸಿಗುತ್ತದೆ. ಪ್ರಕೃತಿಯ ರಮಣೀಯ ಪ್ರದೇಶ ಆಗಿರುವ ಜೋಡುಪಾಲ ಪ್ರವಾಸಿಗರ ಆಕರ್ಷಣೀಯ  ಕೇಂದ್ರವು  ಆಗಿದೆ. ಜೋಡುಪಾಲಾದ 3 ಗ್ರಾಮಗಳು  ಈಗ ನಾಮಾವಶೇಷವಾಗಿವೆ.

ಇಲ್ಲಿದ್ದ  3 ಗ್ರಾಮಗಳ ಸುಮಾರು 300 ಕ್ಕೂ ಹೆಚ್ಚು ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ಮನೆ ಮಠಗಳನ್ನೂ ಕಳೆದುಕೊಂಡ ಇಲ್ಲಿನ ನಿವಾಸಿಗಳು ಪಡುವ  ಪಾಡು ಹೇಳತೀರದಾಗಿದೆ. ಇಲ್ಲಿನ ಸಂತ್ರಸ್ತರಿಗೆ ಸಂಪಾಜೆ ಕಲ್ಲುಗುಂಡಿ  ಅರಂತೋಡು  ತೆಕ್ಕಿಲ ಶಾಲೆಗಳಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ.

ಆದರೆ ಜೋಡುಪಾಲ ಸುಂದರ ಪ್ರದೇಶ ಇನ್ನು ಹಿಂದೆ ಇದ್ದಂತೆ  ಮರು ನಿರ್ಮಾಣ ಸಾಧ್ಯವಿಲ್ಲ. ರಸ್ತೆ ಬದಿಯಲ್ಲಿದ್ದ  ನೂರಾರು ಬ್ರಹತ್  ಮರಗಳು ಧರೆಗೆ  ಉರುಳಿವೆ. ರಸ್ತೆಯ ಕೆಳ ಭಾಗದಲ್ಲಿದ್ದ  ಹತ್ತಾರು ಮನೆಗಳು ಯಾವ ಕ್ಷಣಕ್ಕೂ  ಮುರಿದು  ಬೀಳುವ ಸಾಧ್ಯತೆ ಇದೆ. ಕಾಡಿನ ಮದ್ಯೆ ಹರಿದು ಹೋಗುತಿದ್ದ ಹಳ್ಳದಲ್ಲಿ  ದೊಡ್ಡ ಮರಗಳು ಉರುಳಿ ಬಿದ್ದು ನೀರು ಹರಿಯುವ ಪಥ ಬದಲಾಗಿದೆ. ಸೇತುವೆಗಳು ಮುರಿದು ಹೋಗಿವೆ. ರಸ್ತೆಗಳಲ್ಲಿ ಬಿರುಕು ಬಿಟ್ಟಿದ್ದು ರಸ್ತೆಯನ್ನೇ  ಹುಡಕ ಬೇಕಾದ  ಪರಿಸ್ಥಿತಿ ನಿರ್ಮಾಣವಾಗಿದೆ.

ಗಂಜಿ ಕೇಂದ್ರದಲ್ಲಿರುವ ಸಂತ್ರಸ್ತರರಿಗೆ  ಮತ್ತೆ ಅವರ ಮನೆಗೆ ಹೋಗುವ ಧೈರ್ಯ ಬರುತ್ತಿಲ್ಲ. ಯಾವಾಗ ಮತ್ತೆ ಪ್ರಕೃತಿ ಮುನಿಸಿಕೊಳ್ಳಬಹುದು  ಎಂಬ ಭೀತಿ ಜನರನ್ನು  ಕಾಡುತ್ತಿದೆ. ನಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ. ಜೋಡುಪಾಲ ಗುಡ್ಡ ಕುಸಿದು ಈ ಭಾಗದಲ್ಲಿ ಪ್ರವಾಹ ಬಂದಾಗ ನಮಗೆ ದಿಕ್ಕೇ  ತೋಚದಂತಾಯಿತು. ವೃದ್ಧ ತಂದೆಯನ್ನು  ಹೊತ್ತುಕೊಂಡು ಬಂದೆವು . ಇನ್ನು ಮುಂದೆ ಈ ಪರಿಸ್ಥಿತಿ ಬಾರದಿರಲಿ. ಆ ಕ್ಷಣ ನೆನೆದರೆ  ಭಯವಾಗುತ್ತದೆ  ಎನ್ನುತ್ತಾರೆ ಜೋಡುಪಾಲ ನಿವಾಸಿ ಜಯಶ್ರೀ. ಪ್ರಕೃತಿ ಮುನಿಸಿದರೆ  ಎಷ್ಟ್ಟು ದೊಡ್ಡ ದುರಂತವನ್ನು  ತಡೆಯಲು ಸಾಧ್ಯವಿಲ್ಲ ಎಂಬುದಕ್ಕೆ  ಜೋಡುಪಾಲಾ  ದುರಂತ  ಸಾಕ್ಷಿಯಾಗಿದೆ.





ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ